ಶಾಲಾ ನೀರಿನ ಟ್ಯಾಂಕ್‌ಗೆ ವಿಷ: ಮಕ್ಕಳ ಸುರಕ್ಷತೆಗೆ ಮಾರ್ಗಸೂಚಿ ಪ್ರಕಟಿಸಿದ ಶಿಕ್ಷಣ ಇಲಾಖೆ

Water No water
Cropped shot of an unrecognisable woman holding her hands out for water from a tap in nature
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಶಾಲೆಗಳ ನೀರಿನ ಟ್ಯಾಂಕ್‌ಗೆ ವಿಷ ಬೆರೆಸುತ್ತಿರುವ ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆಯು ಪ್ರತಿ ದಿನ ಮುಖ್ಯ ಶಿಕ್ಷಕರು ಪಾಲಿಸಬೇಕಾದ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಶಾಲೆಯಲ್ಲಿ ಕುಡಿಯುವ ನೀರಿನ ಲಭ್ಯತೆ, ಸ್ವಚ್ಛತೆ, ಒಎಚ್‌ಟಿ ಮತ್ತು ಸಂಪ್ ಟ್ಯಾಂಕ್‌ಗಳಲ್ಲಿ ಕೆಟ್ಟ ವಾಸನೆ ಬರುವ ನೀರು ನೀರಿದ್ದರೆ ಪರಿಶೀಲನೆ, ಶಾಲಾ ನೀರಿನ ಸಂಪ್ ಮುಚ್ಚಿರುವ ಬಗ್ಗೆ (ಲಾಕ್) ಖಚಿತಪಡಿಸಿಕೊಳ್ಳುವುದು, ಬಿಸಿಯೂಟದ ಮೇಲ್ವಿಚಾರಣೆ ಸೇರಿ ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಗಮನಿಸಬೇಕಾದ 25 ಅಂಶಗಳನ್ನು ಶಾಲಾ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿ ಪ್ರಕಟಿಸಿದೆ.

ಪ್ರತಿ ದಿನ ಶಾಲಾ ವ್ಯಾಪ್ತಿಯಲ್ಲಿ ಪಟ್ಟಿಯಲ್ಲಿನ ಅಂಶಗಳನ್ನು ಪರಿಶೀಲಿಸಿ ವ್ಯವಸ್ಥೆ ಸರಿ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ವ್ಯತ್ಯಯವಾದಲ್ಲಿ ಕೂಡಲೇ ಬಗೆಹರಿಸಬೇಕು ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಆಯುಕ್ತರು ಸೂಚನೆ ನೀಡಿದ್ದಾರೆ.

ಗಮನಿಸಬೇಕಾದ ಅಂಶಗಳು:

ಶಾಲಾ ಆವರಣ ಮತ್ತು ಸುತ್ತಲಿನ ಸುರಕ್ಷತೆ,

ಶಾಲಾ ಪ್ರವೇಶ ದ್ವಾರ

ಶಾಲಾ ಕಾಂಪೌಂಡ್

ಕೊಠಡಿಗಳ ಪರಿಶೀಲನೆ

ಶೌಚಾಲಯದ ಸ್ವಚ್ಛತೆ, ಕುಡಿಯುವ ನೀರಿನ ಲಭ್ಯತೆ/ಸ್ವಚ್ಛತೆ

ಒಎಚ್‌ಟಿ ಮತ್ತು ಸಂಪ್ ಟ್ಯಾಂಕ್ ನೀರು ಪರಿಶೀಲನೆ/ಮುಚ್ಚಳ,

ತುರ್ತು ಸ್ಥಿತಿಗೆ ಸನ್ನದ್ಧತೆ

ಪ್ರಥಮ ಚಿಕಿತ್ಸಾ ಕಿಟ್ ಲಭ್ಯತೆ

ಸಡಿಲವಾಗಿ ನೇತಾಡುವ ವಿದ್ಯುತ್ ತಂತಿ/ಕೇಬಲ್ ತಂತಿ

ಬಿಸಿಯೂಟದ ಮೇಳ್ವಿಚಾರಣೆ

ಸಿಲಿಂಡರ್ ಸುರಕ್ಷತೆ

ಆಹಾರ ಧಾನ್ಯಗಳ ಪರಿಶೀಲನೆ

ಅನಧಿಕೃತ ವ್ಯಕ್ತಿಗಳ ಪ್ರವೇಶ ತಡೆಗಟ್ಟುವ ಬಗ್ಗೆ

ಮಕ್ಕಳ ಹಾಜರಾತಿ

ಗೈರು ಹಾಜರಾಗುವ ಮಕ್ಕಳ ಪಾಲಕರಿಗೆ ಸಂದೇಶ ರವಾನೆ

ಸ್ಯಾಟ್ಸ್‌ನಲ್ಲಿ ಹಾಜರಾತಿ ಅಪ್‌ಡೇಟ್

ಮಕ್ಕಳ ಸುರಕ್ಷತೆ ಮತ್ತು ಮೇಲ್ವಿಚಾರಣೆ

ಸಿಡಬ್ಲೂೃಎಸ್‌ಎನ್ ಮಕ್ಕಳ ಸುರಕ್ಷತೆ

ತರಗತಿ ವೇಳಾಪಟ್ಟಿಯಂತೆ ಶಿಕ್ಷಕರ ನಿಯೋಜನೆ

ಆರೋಗ್ಯ ಮತ್ತು ಸ್ವಚ್ಛತೆ

ಸಿಸಿಟಿವಿಯಲ್ಲಿ ಚಲನವಲನ

ಸೂಚನಾ ಲಕದಲ್ಲಿ ಅಗತ್ಯ ಸೂಚನೆ ನೀಡುವುದು

ಸಂದರ್ಶಕರ ಸಹಿಯನ್ನು ಗಮನಿಸುವುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net