

ಬೆಂಗಳೂರು: ಕಳೆದ ಆರು ತಿಂಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದ ನಟ ಧ್ರುವ ಸರ್ಜಾ, ಮತ್ತೆ ಸೆಟ್ಗೆ ಮರಳುತ್ತಿದ್ದಾರೆ. ಪೊಗರು ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಪೊಗರು ತಂಡ, ಈಗ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್; ಸಿಸಿಬಿ ವಿಚಾರಣೆಗೆ ಬಂದ ದಿಗಂತ್
ಎಚ್ಎಂಟಿಯಲ್ಲಿ ಅದ್ದೂರಿ ವೆಚ್ಚದ ಸೆಟ್ ನಿರ್ಮಾಣ ಕೆಲಸ ಈಗಾಗಲೇ ಶುರುವಾಗಿದ್ದು, ಆ ಸೆಟ್ನ ವೆಚ್ಚವೇ ಬರೋಬ್ಬರಿ ಒಂದೂವರೆ ಕೋಟಿಯಂತೆ. ಪೊಗರು ಅಣ್ಣನಿಗೆ ಪೊಗರು.. ಸಾಹಿತ್ಯವುಳ್ಳ ಹಾಡಿಗೆ ಮುರಳಿ ಮಾಸ್ಟರ್ ಸ್ಟೆಪ್ ಹೇಳಿಕೊಡಲಿದ್ದು, ಐದು ದಿನದಲ್ಲಿ ಹಾಡಿನ ಶೂಟಿಂಗ್ ಮಾಡಿಕೊಳ್ಳಲಿದೆ ತಂಡ.
ಇದೇ 25ರಿಂದ ಹಾಡಿನ ಚಿತ್ರೀಕರಣ ಶುರುವಾಗಲಿದ್ದು, ಆ ಹಾಡಿನ ಜತೆಗೆ ಬಾಕಿ ಉಳಿದ ಚಿತ್ರೀಕರಣವನ್ನೂ ಮಾಡಿಕೊಳ್ಳಲು ನಿರ್ದೇಶಕರು ಯೋಜನೆ ಸಿದ್ಧಪಡಿಸಿದ್ದಾರೆ. ಅದು ಮುಗಿಯುತ್ತಿದ್ದಂತೆ, ಇಡೀ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆದಂತೆ ಎಂದು ಮಾಹಿತಿ ನೀಡುತ್ತಾರೆ ನಂದಕಿಶೋರ್.
ಈಗಾಗಲೇ ಪೊಗರು ಚಿತ್ರದ ಖರಾಬು ಹಾಡು ಕನ್ನಡದ ಜತೆಗೆ ತೆಲುಗಿನಲ್ಲೂ ಮೋಡಿ ಮಾಡಿದೆ. ಮಿಲಿಯನ್ಗಟ್ಟಲೇ ಜನರಿಂದ ವೀಕ್ಷಣೆ ಪಡೆದಿದೆ. ರಶ್ಮಿಕಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಧನಂಜಯ್, ಮಯೂರಿ, ರವಿಶಂಕರ್, ಚಿಕ್ಕಣ್ಣ ಸೇರಿ ಹಲವು ಸ್ಟಾರ್ ಕಲಾವಿದರ ದಂಡೇ ಇದೆ.