ಪೋಕ್ಸೋ ಅಪರಾಧಿಗೆ 40 ವರ್ಷ ಜೈಲು

Pocso case
Published on

ಕಾಸರಗೋಡು: ಹದಿನಾರರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿ ಇಡುಕ್ಕಿ ಜಿಲ್ಲೆಯ ಉಡುಂಬಚ್ಚಾಲ ಕಲ್ಲುಂಕ್ಲಾಕಲ್ ನಿವಾಸಿ ಶಾಮಿಲ್ ಕೆ.ಮ್ಯಾಥ್ಯೂ ಎಂಬಾತನಿಗೆ ಕಾಸರಗೋಡು ಫಾಸ್ಟ್‌ಟ್ರಾೃಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮುರಮೇಶ್ ಚಂದ್ರಭಾನು ವಿವಿಧ ಸೆಕ್ಷನ್‌ಗಳಲ್ಲಿ 40 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ತೀರ್ಪಿತ್ತಿದ್ದಾರೆ. 2016ರ ನವೆಂಬರ್ ತಿಂಗಳಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಯಮರ್‌ಮೂಲೆಯ 16ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಶಾಮಿಲ್ ಕೆ.ಮ್ಯಾಥ್ಯೂ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ವಿದ್ಯಾನಗರ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಬಾಬು ಪೆರಿಙೋತ್ ಕೇಸ್ ದಾಖಲಿಸಿ ತನಿಖೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net