ಬೆಳ್ತಂಗಡಿ : ಬೆಳಾಲು ಎಂಬಲ್ಲಿ ಪಿಯುಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಶಂಕರ ಗೌಡ ಎಂಬಾತನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ತಂದೆ ತಾಯಿ ತರಗೆಲೆ ತರಲು ಹೋಗಿದ್ದ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೀರು ಕೇಳುವ ನೆಪದಲ್ಲಿ ಬಂದ ಯುವಕ ಪಿಯುಸಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಆತನ ಕೈಗೆ ಕಚ್ಚಿ ಯುವತಿ ತಪ್ಪಿಸಿಕೊಂಡು ಹತ್ತಿರದ ಚಿಕ್ಕಪ್ಪನ ಮನೆಗೆ ಓಡಿ ಬಂದು ವಿಷಯ ತಿಳಿಸಿದ್ದಾಳೆ. ಕೂಡಲೇ ಅಲ್ಲಿಗೆ ಬಂದು ನೋಡಿದಾಗ ಆತ ಪರಾರಿಯಾಗಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
