ಪಿಎಂಸಿ ಬ್ಯಾಂಕ್ ಹಗರಣದ ಆರೋಪಿ ರಾಕೇಶ್​​ಗೆ ಕೋವಿಡ್ ದೃಢ; ಸಂಬಂಧಿಕರು ಗದ್ದಲ ಸೃಷ್ಟಿಸಿದ್ದೇಕೆ?

Rakesh
Published on

ಮುಂಬೈ: ಪಿಎಂಸಿ ಬ್ಯಾಂಕ್ ಹಗರಣ ಆರೋಪಿ ರಾಕೇಶ್ ವಾಧವನ್ ನನ್ನು ಜೆಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆತನ ಸಂಬಂಧಿಕರೆಂದು ಹೇಳಿಕೊಳ್ಳುತ್ತಿರುವ ಕೆಲವರು ಆಸ್ಪತ್ರೆಯಲ್ಲಿ ಗದ್ದಲದ ಸೃಷ್ಟಿಸಿದ್ದಾರೆ. ಜೈಲಿನ ಐಜಿ ದೀಪಕ್ ಪಾಂಡೆ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಎಚ್‌ಡಿಐಎಲ್ ಪ್ರೊಮೋಟರ್ ರಾಕೇಶ್ ವಾಧವನ್ ಮತ್ತು ಅವರ ಮಗನೊಂದಿಗೆ ಮೊದಲು ಪಿಎಮ್‌ಸಿ ಬ್ಯಾಂಕಿನಿಂದ ಕಾನೂನುಬಾಹಿರವಾಗಿ ಪಡೆದ 4,500 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲವನ್ನು ಮರುಪಾವತಿ ಮಾಡಿಲ್ಲ ಎಂಬ ಆರೋಪವಿದೆ. 


ವಾಧವನ್ ನನ್ನು 2019 ರ ಅಕ್ಟೋಬರ್‌ನಲ್ಲಿ ಬಂಧಿಸಿ ನಂತರ ಆರ್ಥುರ್ ರಸ್ತೆ ಜೈಲಿಗೆ ಕಳುಹಿಸಲಾಗಿತ್ತು. ಆತನಿಗೆ ಉಸಿರಾಟದ ತೊಂದರೆ ಕಂಡುಬಂದ ಮಾಹಿತಿ ಸಿಕ್ಕ ನಂತರ ಜುಲೈ 6 ರಂದು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜುಲೈ 13 ರಂದು ಆತನಿಗೆ ಸೋಂಕು ದೃಢಪಟ್ಟಿರುವುದು ತಿಳಿದುಬಂತು.
ಆದರೆ ವಾಧ್ವಾನ್ ನನ್ನು ಆಸ್ಪತ್ರೆಗೆ ಕರೆತಂದಾಗ, ಅವರ ಸಂಬಂಧಿಕರೆಂದು ಹೇಳಿಕೊಳ್ಳುತ್ತಿರುವ ಕೆಲವರು ಅವನಿಗೆ ಸರಿಯಾದ ಚಿಕಿತ್ಸೆ ನೀಡಲಾಗಿದೆಯೆ ಅಥವಾ ಇಲ್ಲವೇ ಎಂದು ಖಚಿತವಾಗಿಲ್ಲ ಎಂದು ರಾಕೇಶ್ ವಾಧವನ್ ನನ್ನು ಇರಿಸಲಾದ ವಾರ್ಡಿನ ಹೊರಗೆ ಗದ್ದಲ ಆರಂಭಿಸಿದರು ಎಂದು ಆರ್ಥರ್ ರಸ್ತೆ ಜೈಲು ಆಡಳಿತಕ್ಕೆ ಜೆಜೆ ಆಸ್ಪತ್ರೆಯಿಂದ ದೂರು ಬಂದಿದೆ.  


ಕಾರಾಗೃಹದ ಐಜಿ ದೀಪಕ್ ಪಾಂಡೆ 'ಆಸ್ಪತ್ರೆಯ ಆಡಳಿತದಿಂದ ದೂರು ಬಂದಿದ್ದು, ಗದ್ದಲ ಸೃಷ್ಟಿಸಿದವರ ಪೈಕಿ ಒಬ್ಬರು ಜೆಜೆ ಆಸ್ಪತ್ರೆಯಲ್ಲಿ ವೈದ್ಯ ಎಂದು ಹೇಳಿಕೊಳ್ಳುತ್ತಾರೆ. ನಾವು ಈ ಕುರಿತು ತನಿಖೆಗೆ ಆದೇಶಿಸಿದ್ದೇವೆ. ಈ ಕುರಿತು ಮಾಹಿತಿ ಪಡಯಲು ಆಸ್ಪತ್ರೆಯ ಆಡಳಿತದೊಂದಿಗೆ ಸಂಪರ್ಕದಲ್ಲಿರಬೇಕೆಂದು ಆರ್ಥುರ್ ರಸ್ತೆ ಜೈಲು ಅಧೀಕ್ಷಕರಿಗೆ ತಿಳಿಸಲಾಗಿದೆ. ಅಗತ್ಯವಿದ್ದರೆ ಪ್ರಕರಣದಲ್ಲಿ ಕುರಿತು ಎಫ್ಐಆರ್ ದಾಖಲಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.
ರಾಕೇಶ್ ವಾಧವನ್ ನನ್ನು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆರ್‌ಬಿಐ, 2019 ರ ಸೆಪ್ಟೆಂಬರ್‌ನಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಡಿ ಪಿಎಮ್‌ಸಿ ಬ್ಯಾಂಕ್‌ಗೆ ವಾಪಸಾತಿ ಮತ್ತು ಇತರ ನಿರ್ಬಂಧಗಳನ್ನು ವಿಧಿಸಿದೆ. ಅಂದಿನಿಂದ, ಲಕ್ಷಾಂತರ ಠೇವಣಿದಾರರು ಕಷ್ಟಪಟ್ಟು ಸಂಪಾದಿಸಿದ ಹಣಕ್ಕಾಗಿ ಹೆಣಗಾಡುತ್ತಿದ್ದಾರೆ, ಅದು ಈಗ ಬ್ಯಾಂಕಿನಲ್ಲಿ ಸಿಲುಕಿಕೊಂಡಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net