ಸರ್ಕಾರಿ ಶಾಲೆ ಮಕ್ಕಳಿಗೆ ಪೌಷ್ಠಿಕ ಆಹಾರ: 'ಪಿಎಂ ಪೋಷಣ್​' ಯೋಜನೆ

school
Published on

ನವದೆಹಲಿ: ದೇಶಾದ್ಯಂತ ಬಡಮಕ್ಕಳಿಗೆ ಸುಪೋಷಿತ ಆಹಾರ ಒದಗಿಸಲು ಮತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು 'ಪಿಎಂ ಪೋಷಣ್' ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇಂದು ನವದೆಹಲಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್​ ಠಾಕುರ್​​ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಪೋಷಣ್​ ಯೋಜನೆಯ ಅಡಿಯಲ್ಲಿ ದೇಶದ 11 ಲಕ್ಷ 20 ಸಾವಿರ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಲಾಗುವುದು. ಬಡವಿದ್ಯಾರ್ಥಿಗಳ ಆರೋಗ್ಯವನ್ನು ಸುಧಾರಿಸುವ ದೃಷ್ಟಿಯಿಂದ ಸ್ಥಳೀಯವಾಗಿ ಸಿಗುವ ಪೋಷಕಾಂಶಭರಿತ ಆಹಾರಗಳನ್ನು ಬಳಸಲಾಗುವುದು ಎಂದು ಠಾಕುರ್​ ತಿಳಿಸಿದ್ದಾರೆ.

ಈ ಯೋಜನೆಯು 5 ವರ್ಷಗಳ ಕಾಲ ನಡೆಯಲಿದ್ದು, ಇದಕ್ಕಾಗಿ 1.31 ಲಕ್ಷ ಕೋಟಿ ರೂ.ಗಳ ವೆಚ್ಚವಾಗಲಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೊಡುಗೆಯು 60:40 ರೇಷಿಯೋದಲ್ಲಿರುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಶೇ. 90 ರಷ್ಟು ಕೊಡುಗೆ ಕೇಂದ್ರ ಸರ್ಕಾರದ್ದೇ ಇರಲಿದೆ ಎಂದು ಸಚಿವ ಠಾಕುರ್​ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net