Narendra Modi | ಅಷ್ಟಮಿ; ದೆಹಲಿಯ ಕಾರ್ಲಿ ಬಾರಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

PM Narendra Modi visits Durga puja
Published on

Narendra Modi: ಇಂದು ಅಷ್ಟಮಿಯ ಹಿನ್ನಲೆಯಲ್ಲಿ ದೆಹಲಿಯ ಸಿಆರ್ ಪಾರ್ಕ್‌ನಲ್ಲಿರುವ ದುರ್ಗಾ ಪೂಜಾ ಪೆಂಡಲ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕಾರ್ಲಿ ಬಾರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಹಬ್ಬದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಮೆಲ್ನೋಟಕ್ಕೆ ಕಂಡು ಬಂದರು, ಇದು ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ತಯಾರಿ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವಾರ ಗೃಹ ಸಚಿವ ಅಮಿತ್ ಶಾ, ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು, ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿಯಾಗಿದ್ದರು ಇತ್ತೀಚಿನ ಭೇಟಿ ಹೊಸ ಚರ್ಚೆಗಳಿಗೆ ನಾಂದಿ ಹಾಡಿವೆ.

ಬಿಹಾರದಲ್ಲಿ ಏಕ್ ಭಾರತ್ ಶ್ರೇಷ್ಠ ಭಾರತ್ ಉಪಕ್ರಮದಂತೆಯೇ, ಭಾವನಾತ್ಮಕ ಮತ್ತು ಸಾಂಸ್ಕೃತಿಕ ಭಾಗವಹಿಸುವಿಕೆಯ ಮೂಲಕ ಬಂಗಾಳಿ ಮತದಾರರ ದೊಡ್ಡ ವರ್ಗದೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ದುರ್ಗಾ ಪೂಜೆ ಎನ್ನುವುದು ಬಂಗಾಳದಲ್ಲಿ ಹಬ್ಬ ಮಾತ್ರವಲ್ಲ, ರಾಷ್ಟ್ರೀಯ ಆಚರಣೆಗೆ ಸಮವಾಗಿದೆ. ದುರ್ಗಾ ಪೂಜೆಯ ಸಂದರ್ಭದಲ್ಲಿ, ಪ್ರಮುಖ ನಗರಗಳು ಮತ್ತು ಬೇರೆಡೆ ವಾಸಿಸುವ ಬಂಗಾಳಿಗಳನ್ನು ಸೆಳೆಯಲು ಬಿಜೆಪಿ ವಿಶೇಷ ಯೋಜನೆಯನ್ನು ರೂಪಿಸಿದೆ. ಉತ್ತರ ಪ್ರದೇಶ, ಮುಂಬೈ, ದೆಹಲಿ, ಬಿಹಾರ, ಜಾರ್ಖಂಡ್ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ನೆಲೆಸಿರುವ 40,000 ಕ್ಕಿಂತ ಹೆಚ್ಚು ಬಂಗಾಳಿ ಸಮುದಾಯದ ಜನಸಂಖ್ಯೆ ಇದ್ದು, ಬಿಜೆಪಿ ದುರ್ಗಾ ಪೂಜಾ ಪೆಂಡಲ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜಾಗೃತಿ ಅಭಿಯಾನಗಳನ್ನು ಆಯೋಜಿಸುತ್ತಿದೆ.

ಬಂಗಾಳ ಹೊರತುಪಡಿಸಿ ಬೇರೆ ರಾಜ್ಯಗಳ 150 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬಂಗಾಳಿ ಹಿಂದೂಗಳು ಗಣನೀಯ ಪ್ರಮಾಣದಲ್ಲಿದ್ದಾರೆ ಎಂದು ಬಿಜೆಪಿ ಸಮೀಕ್ಷೆ ಮೂಲಕ ಅರಿತುಕೊಂಡಿದ್ದು, ಈ ಪ್ರದೇಶಗಳಲ್ಲಿನ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net