More

    VIDEO| ‘ಎಷ್ಟೋ ಪಂದ್ಯ ಗೆದ್ದಿದ್ದೀರಿ ಇದೊಂದು ಸೋತಿದ್ದೀರಿ ಅಷ್ಟೇ’…; ಟೀಮ್​ ಇಂಡಿಯಾ ಆಟಗಾರರಿಗೆ ಪ್ರಧಾನಿ ವಿಶೇಷ ಅಪ್ಪುಗೆ

    ನವದೆಹಲಿ: ಭಾನುವಾರ ಅಹಮದಾಬಾದ್​ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್​ 2023ರ ಫೈನಲ್​ ಹಣಾಹಣಿಯಲ್ಲಿ ಟೀಮ್​ ಇಂಡಿಯಾ ಕಾಂಗೂರು ಪಡೆ ವಿರುದ್ಧ ಸೋಳೂ ಅನುಭವಿಸಿತು. ಸ್ಟೇಡಿಯಂನಲ್ಲಿ ಸೇರಿದ್ದ 1.3 ಲಕ್ಷ ಜನವನ್ನು ಮೀರಿ ಅದೆಷ್ಟೋ ಸಂಖ್ಯೆಯ ಕ್ರಿಕೆಟ್​ ಅಭಿಮಾನಿಗಳು ಮತ್ತು ಭಾರತೀಯರು ಇಂಡಿಯಾ ಸೋತ ಕೂಡಲೇ ಕಂಬನಿ ಮಿಡಿದರು.

    ಇದನ್ನೂ ಓದಿGold, Silver Price; 22 ಕ್ಯಾರಟ್​ನ 10 ಗ್ರಾಂ ಚಿನ್ನದ ಇಂದಿನ ಬೆಲೆ ಎಷ್ಟು ಗೊತ್ತಾ?

    ಕೊನೆಯ ಬಾಲ್​ ಮುಗಿಯುವವರೆಗೂ ದುಃಖವನ್ನು ಹಿಡಿದಿಟ್ಟುಕೊಂಡಿದ್ದ ಟೀಮ್​ ಇಂಡಿಯಾ ಆಟಗಾರರು, ಪಂದ್ಯ ಅಂತ್ಯವಾಗಿದ್ದೇ ತಡ ನೋವಿನಿಂದ ಕಣ್ಣೀರಿಟ್ಟರು. ಟೀಮ್​ ಇಂಡಿಯಾ ಅನುಭವಿಸಿದ ಸೋಲು ಭಾರತೀಯರಲ್ಲಿ ಆಗಾಧ ನೋವನ್ನು ತಂದೊಡ್ಡಿತು.

    ಫೈನಲ್​ ಪಂದ್ಯವನ್ನು ವೀಕ್ಷಿಸುವ ಮುಖೇನ ತಂಡಕ್ಕೆ ಶುಭಹಾರೈಸಲು ಕ್ರೀಡಾಂಗಣಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣ ಮ್ಯಾಚ್​ ಮುಗಿಯುವವರೆಗೂ ಕುಳಿತ್ತಿದ್ದರು. ಪಂದ್ಯ ಮುಗಿದ ಬಳಿಕ ಟೀಮ್​ ಇಂಡಿಯಾದ ಆಟಗಾರರು ಡ್ರೇಸಿಂಗ್​ ರೂಂಗೆ ತೆರಳಿದ ಬಳಿಕ ವೈಯಕ್ತಿಕವಾಗಿ ಆಟಗಾರರನ್ನು ಮಾತನಾಡಿಸಿದ ಪ್ರಧಾನಿ, ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಇಬ್ಬರನ್ನು ಎಡ ಮತ್ತು ಬಲದಲ್ಲಿ ನಿಲ್ಲಿಸಿಕೊಂಡು ಸಮಾಧಾನ ಪಡಿಸಿದರು.

    ಇದನ್ನೂ ಓದಿ: ಡ್ರೆಸ್ಸಿಂಗ್‌ ರೂಂಗೆ ತೆರಳಿ ಟೀಮ್ ಇಂಡಿಯಾ ಆಟಗಾರರನ್ನು ಸಂತೈಸಿದ ಮೋದಿ

    “ಎಷ್ಟೋ ಪಂದ್ಯಗಳನ್ನು ಗೆದ್ದಿದ್ದೀರಿ ಇದೊಂದು ಮ್ಯಾಚ್​ ಸೋತಿದ್ದೀರಿ, ಅದಕ್ಕೆ ಬೇಸರ ಮಾಡಿಕೊಳ್ಳಬೇಡಿ. ಇವೆಲ್ಲವೂ ಕ್ರೀಡೆಯಲ್ಲಿ ಸರ್ವೆ ಸಾಮಾನ್ಯ” ಎಂಬ ಮಾತುಗಳೊಂದಿಗೆ ಆಟಗಾರರಲ್ಲಿ ಧೈರ್ಯ ತುಂಬಿದರು. ವಿರಾಟ್​ ಮತ್ತು ರೋಹಿತ್​ ಬಳಿಕ ಶುಭಮನ್​ ಗಿಲ್​, ರವೀಂದ್ರ ಜಡೇಜಾ, ರಾಹುಲ್​ ದ್ರಾವಿಡ್​ಗೆ ಕೈ ಕೊಟ್ಟು ಸಮಾಧಾನದ ಮಾತುಗಳನ್ನು ತಿಳಿಸಿದರು. ತದನಂತರ ಮೊಹ್ಮಮದ್​ ಶಮಿ ಅವರನ್ನು ಅಪ್ಪಿಕೊಂಡ ಪ್ರಧಾನಿ, “ಉತ್ತಮ ಪ್ರದರ್ಶನ ನೀಡಿದ್ದೀರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಟೀಮ್​ ಇಂಡಿಯಾ ಆಟಗಾರರೊಂದಿಗೆ ಕೆಲ ಸಮಯ ಮಾತನಾಡಿ, ಹೆಗಲ ತಟ್ಟಿ, ಧೈರ್ಯದ ಮಾತುಗಳನ್ನು ತಿಳಿಸಿದ ಪ್ರಧಾನಿ ಮೋದಿಗೆ ಆಟಗಾರರು ವಿಶೇಷವಾಗಿ ಧನ್ಯವಾದ ತಿಳಿಸಿದರು. ಡ್ರೇಸಿಂಗ್​ ರೂಂನಲ್ಲಿ ನಡೆದ ಈ ಒಂದು ಭಾವನಾತ್ಮಕ ದೃಶ್ಯ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಲೈಕ್​ ಮಾಡಿ, ಹಂಚಿಕೊಳ್ಳುತ್ತಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts