

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಇಂದು ಬಹುತೇಕ ಕೇಸರಿಮಯವಾಗಿತ್ತು. ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ರಾಜಧಾನಿಯಲ್ಲಿ ಮತಬೇಟೆಗೆ ಇಳಿದ ಪ್ರಧಾನಿ ಮೋದಿ ಎರಡನೇ ದಿನದ ಮೆಗಾ ರೋಡ್ ಶೋ ನಡೆಸಿದರು. ಅದ್ಧೂರಿಯಾಗಿ ನಡೆದ ರೋಡ್ ಶೋ ಫೋಟೋ ಝಲಕ್ ಅನ್ನು ನೀವಿಲ್ಲಿ ಕಣ್ತುಂಬಿಕೊಳ್ಳಬಹುದು.
ತಿಪ್ಪಸಂದ್ರ ರಸ್ತೆಯಿಂದ ರೋಡ್ ಶೋ ಆರಂಭವಾಗಿ ಎಸ್.ವಿ. ರೋಡ್ ಮೂಲಕ ಹಲಸೂರು ಪೊಲೀಸ್ ಠಾಣೆ ಮುಂದೆಯಿಂದ ಟ್ರಿನಿಟಿ ಜಂಕ್ಷನ್ ತೆರಳಿ ಕೊನೆಗೊಂಡಿತು. ದಾರಿಯುದ್ದಕ್ಕೂ ಮೋದಿ ಮೋದಿ ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು. ನೆಚ್ಚಿನ ಪ್ರಧಾನಿ ಮೇಲೆ ಬೆಂಗಳೂರಿಗರು ಹೂಮಳೆ ಸುರಿಸಿದರು. ಕೇಸರಿ ಬಾವುಟಗಳು ರಾರಾಜಿಸಿದವು.
ರೋಡ್ ಶೋ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಮತ್ತೆ ಬೆಂಗಳೂರು ಜನರ ನಡುವೆ ಇರುವುದು ಆನಂದದ ಸಂಗತಿ. ಇಂದು ನಮ್ಮನ್ನು ಆಶೀರ್ವದಿಸಲು ಬಂದಿರುವ ಎಲ್ಲರಿಗೂ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.