ಸಿಎಂಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್​ ಪ್ರಾರಂಭಿಸಿದ ಪ್ರಧಾನಿ; ಪ್ರತಿಯೊಬ್ಬರಿಗೂ 20 ನಿಮಿಷ ಅವಕಾಶ

PM modi
Published on

ನವದೆಹಲಿ: ಮೂರನೇ ಹಂತದ ಲಾಕ್​ಡೌನ್​ ಅವಧಿ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಇಂದು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸುತ್ತಿದ್ದಾರೆ.

ಈಗಾಗಲೇ ಮುಖ್ಯಮಂತ್ರಿಗಳೊಂದಿಗಿನ ಮೋದಿಯವರ ವಿಡಿಯೋ ಕಾನ್ಫರೆನ್ಸ್​ ಸಭೆ ಪ್ರಾರಂಭವಾಗಿದೆ. ಈ ಬಾರಿ ಎಲ್ಲ ರಾಜ್ಯಗಳ ಸಿಎಂಗಳಿಗೆ ಪ್ರತಿಯೊಬ್ಬರಿಗೂ ಮಾತನಾಡಲು 20 ನಿಮಿಷ ಅವಕಾಶ ಕೊಡಲಾಗಿದೆ. ಈ ಸಮಯದಲ್ಲಿ ಎಲ್ಲರೂ ತಮ್ಮ ರಾಜ್ಯದ ಕೊವಿಡ್​-19 ಸ್ಥಿತಿಗತಿ, ನಿಯಂತ್ರಣ ಕ್ರಮಗಳು, ಸಲಹೆಗಳನ್ನು ನೀಡಬೇಕು.

ಮೊದಲನೇದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯವರೊಂದಿಗೆ ಮೋದಿಯವರು ಚರ್ಚೆ ಮಾಡುತ್ತಿದ್ದು, ನಮ್ಮ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ 19ನೇಯವರಾಗಿ ಮಾತನಾಡಲಿದ್ದಾರೆ. ನಮ್ಮ ರಾಜ್ಯದ ಕರೊನಾ, ಲಾಕ್​ಡೌನ್ ಸ್ಥಿತಿಗಳನ್ನು ಪ್ರಧಾನಿಯವರ ಬಳಿ ಹೇಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net