ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ; ವಿಡಿಯೋ ವೈರಲ್

Elephant Ride
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಹಾಗೂ ಜೀಪ್ ಸಫಾರಿ ಮಾಡದ್ದಾರೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಚೊಚ್ಚಲ ಭೇಟಿ ನೀಡಿದ ಪ್ರಧಾನಿ ಮೋದಿ ಸೆಂಟ್ರಲ್ ಕೊಹೊರಾ ಮಿಹಿಮುಖ್ ಪ್ರದೇಶದಲ್ಲಿ ಆನೆ ಹಾಗೂ ಜೀಪ್​ ಸಫಾರಿ ನಡೆಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಎರಡು ದಿನಗಳ ಅಸ್ಸಾಂ ಪ್ರವಾಸಕ್ಕೆ ಬಂದಿರುವ ಅವರು, ಶುಕ್ರವಾರ ಸಂಜೆ ಕಾಜಿರಂಗಕ್ಕೆ ಆಗಮಿಸಿದ್ದರು. ಪ್ರಧಾನಿಗೆ ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ಹಾಗೂ ಇತರೆ ಹಿರಿಯ ಅರಣ್ಯ ಸಿಬ್ಬಂದಿಗಳು ಸಾಥ್‌ ನೀಡಿದರು.

ಶನಿವಾರ ಮಧ್ಯಾಹ್ನ ಅಹೊಮ್ ಜನರಲ್ ಲಚಿತ್‌ ಬರ್ಪುಕನ್‌ ಅವರ 125 ಅಡಿಯ ‘ಶೌರ್ಯದ ಪ್ರತಿಮೆ’ಯನ್ನು ಅವರು ಅನಾವರಣಗೊಳಿಸಲಿದ್ದಾರೆ. ಜೊರ್ಹತ್‌ ಜಿಲ್ಲೆಯ ಮೆಲೆಂಗ್ ಮೆಟೆಲಿ ಪೊಥರ್‌ನಲ್ಲಿ, ಕೇಂದ್ರ ಹಾಗೂ ರಾಜ್ಯ ಪ್ರಾಯೋಜಿತ ಸುಮಾರು 18 ಸಾವಿರ ಕೋಟಿಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net