ಶ್ರೀರಾಮನ ಭಜನೆಯನ್ನು #ShriRamBhajan ಜೊತೆಗೆ ಶೇರ್ ಮಾಡಿ… 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ ಮನವಿ

Modi (1)
Published on

ನವದೆಹಲಿ: 2023ರ ಕೊನೆಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕುರಿತು ದೇಶವನ್ನುದ್ದೇಶಿಸಿ ಮಾತನಾಡಿದರು. ದೇಶಿ ಮತ್ತು ವಿದೇಶಿ, ಮನರಂಜನೆ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳ ಕುರಿತು ಮಾತನಾಡಿದ ಅವರು, ಮುಂಬರುವ ವರ್ಷದಲ್ಲಿ ದೇಶವು ಉತ್ತಮವಾಗಿರಲಿದೆ ನಾವು 2024 ರಲ್ಲಿ ಈ ಉತ್ಸಾಹ ಮತ್ತು ಆವೇಗವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು. ಅಂದಹಾಗೆ ಇದು ಮೋದಿಯವರ 108ನೇ ಆವೃತ್ತಿಯ ಮನ್ ಕಿ ಬಾತ್.

ಇದೇ ಸಂದರ್ಭದಲ್ಲಿ ಸಂಖ್ಯೆ 108 ರ ಮಹತ್ವ ವಿವರಿಸಿದ ಮೋದಿಯವರು, ಅದರ ಪವಿತ್ರತೆ ತೀವ್ರ ಅಧ್ಯಯನದ ವಿಷಯವಾಗಿದೆ. ಜಪಮಾಲೆಯಲ್ಲಿ 108 ಮಣಿಗಳು, 108 ಬಾರಿ ಪಠಣ, 108 ದೈವಿಕ ಗೋಳಗಳು, ದೇವಾಲಯಗಳಲ್ಲಿ 108 ಮೆಟ್ಟಿಲುಗಳು, 108 ಗಂಟೆಗಳು, ಈ 108 ಸಂಖ್ಯೆಯು ಅಪಾರ ನಂಬಿಕೆಯೊಂದಿಗೆ ಸಂಬಂಧಿಸಿದೆ. ಹಾಗಾಗಿಯೇ 108ನೇ ಸಂಚಿಕೆ ‘ಮನ್ ಕಿ ಬಾತ್’ ನನ್ನ ಪಾಲಿಗೆ ಹೆಚ್ಚು ವಿಶೇಷ ಎನಿಸಿದೆ.” ಎಂದರು.

ಭಾರತವು ನಾವೀನ್ಯತೆ ಕೇಂದ್ರವಾಗುತ್ತಿರುವ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, 2015 ರಲ್ಲಿ ಭಾರತ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 81 ನೇ ಸ್ಥಾನದಲ್ಲಿತ್ತು ಮತ್ತು ಇಂದು ಈ ಶ್ರೇಣಿ 40 ನೇ ಸ್ಥಾನದಲ್ಲಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಹರ್ಮನ್ ಪ್ರೀತ್ ಕೌರ್ ಮತ್ತು ನಟ ಅಕ್ಷಯ್ ಕುಮಾರ್ ಕೂಡ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಪ್ರಾದೇಶಿಕ ಭಾಷೆಗಳು ಮತ್ತು ಮಾತೃಭಾಷೆಯ ಬಗ್ಗೆಯೂ ಮಾತನಾಡಿದರು. ಅಲ್ಲದೆ, ಜಾರ್ಖಂಡ್‌ನ ಬುಡಕಟ್ಟು ಹಳ್ಳಿಗಳಲ್ಲಿ ಮಕ್ಕಳಿಗೆ ಕುದುಖ್ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ವಿಶಿಷ್ಟ ಉಪಕ್ರಮವನ್ನು ಶ್ಲಾಘಿಸಿದರು. ದೇಶ 5ನೇ ಅತಿದೊಡ್ಡ ಆರ್ಥಿಕತೆಯಾಗುತ್ತಿರುವುದಕ್ಕೆ, ಜಿ-20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿರುವ ಬಗ್ಗೆ ಮೋದಿ ಸಂತಸ ವ್ಯಕ್ತಪಡಿಸಿದರು.

ಮನರಂಜನಾ ವಲಯದ ಬಗ್ಗೆ ಚರ್ಚಿಸುವಾಗ ನಾಟು-ನಾಟು ಹಾಡು ಆಸ್ಕರ್ ಪಡೆದ ಬಗ್ಗೆ ಪ್ರಸ್ತಾಪಿಸಿದರು ಮತ್ತು ದಿ ಎಲಿಫೆಂಟ್ ವಿಸ್ಪರ್ ಪಡೆದ ಗೌರವದ ಬಗ್ಗೆ ಮಾತನಾಡುವುದನ್ನು ತಪ್ಪಿಸಲಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ದೇಶದ ಆಟಗಾರರು ತೋರಿದ ಅತ್ಯುತ್ತಮ ಪ್ರದರ್ಶನದ ಬಗ್ಗೆಯೂ ಮೋದಿ ಮಾತನಾಡಿದರು. ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 107 ಆಟಗಾರರು 11 ಪದಕಗಳನ್ನು ಗೆದ್ದಿದ್ದಾರೆ ಎಂದು ರಾಷ್ಟ್ರಕ್ಕೆ ನೆನಪಿಸಿದರು. ವಿಶ್ವಕಪ್‌ನಲ್ಲೂ ಕ್ರಿಕೆಟಿಗರ ಪ್ರದರ್ಶನ ಎಲ್ಲರ ಮನ ಗೆದ್ದಿತ್ತು ಎಂದರು.

ರಾಮ ಮಂದಿರದ ಬಗ್ಗೆ ಉಲ್ಲೇಖಿಸಿದ ಅವರು, ಇಡೀ ದೇಶದಲ್ಲಿ ಅದರ ಬಗ್ಗೆ ಉತ್ಸಾಹವಿದೆ. ಜನರು ತಮ್ಮ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಕೆಲವೇ ದಿನಗಳಲ್ಲಿ ಶ್ರೀರಾಮ ಮತ್ತು ಅಯೋಧ್ಯೆಗೆ ಸಂಬಂಧಿಸಿದಂತೆ ಅನೇಕ ಹೊಸ ಹಾಡುಗಳು ಮತ್ತು ಹೊಸ ಭಜನೆಗಳನ್ನು ರಚಿಸಲಾಗುತ್ತದೆ. ಅನೇಕರು ಹೊಸ ಕವಿತೆಗಳನ್ನೂ ಬರೆಯುತ್ತಿದ್ದಾರೆ. ಇದರಲ್ಲಿ ಅನೇಕ ಅನುಭವಿ ಕಲಾವಿದರಿದ್ದು, ಹೊಸ ಉದಯೋನ್ಮುಖ ಯುವ ಕಲಾವಿದರು ಮನಮೋಹಕ ಕೀರ್ತನೆಗಳನ್ನು ರಚಿಸಿದ್ದಾರೆ ಎಂದರು.

ಮನ್ ಕಿ ಬಾತ್‌ನಲ್ಲಿ, "ನಾವೆಲ್ಲರೂ ಸಾಮಾನ್ಯ ಹ್ಯಾಶ್‌ಟ್ಯಾಗ್ #shrirambhajan ನೊಂದಿಗೆ ಹಂಚಿಕೊಳ್ಳೋಣ. ಶ್ರೀ ರಾಮ್ ಭಜನ್ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ನಾನು ವಿನಂತಿಸುತ್ತೇನೆ. ಇದು ಭಾವನೆಗಳು ಮತ್ತು ಭಕ್ತಿಯ ಹರಿವು ಆಗಿರುತ್ತದೆ, ಪ್ರತಿಯೊಬ್ಬರೂ ರಾಮನ ಭಕ್ತಿಯಲ್ಲಿ ಮುಳುಗುತ್ತಾರೆ'' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net