

PM Modi: ಪಾಕಿಸ್ತಾನ ವಿರುದ್ಧದ 'ಆಪರೇಷನ್ ಸಿಂಧೂರ' ಬಳಿಕ ಇಡೀ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಶಕ್ತಿ ಮತ್ತು ತಾಳ್ಮೆ ಎರಡನ್ನೂ ನೋಡಿದ್ದಾರೆ. ಆಪರೇಷನ್ ಸಿಂಧೂರವನ್ನು ನಮ್ಮ ಸೈನಿಕರು ಯಶಸ್ವಿಗೊಳಿಸಿದ್ದಾರೆ ಎಂದರು.
"ದೇಶದ ಪ್ರತಿಯೊಬ್ಬ ತಾಯಿ ಮತ್ತು ಸಹೋದರರಿಗೂ ಈ ಪರಾಕ್ರಮ ಸಮರ್ಪಣೆ. ಮತ್ತು ಸೈನಿಕರಿಗೆ ಸೆಲ್ಯೂಟ್ ಹೇಳ್ತೀನಿ. ಪಹಲ್ಗಾಮ್ ನಾಗರಿಕರನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈಯಲಾಯಿತು. ಇದು ಉಗ್ರವಾದಾದ ಅತ್ಯಂತ ಕ್ರೂರ ಮುಖವಾಗಿತ್ತು. ಈ ವಿಷಯ ನನ್ನಲ್ಲಿ ಭಾರೀ ದುಃಖ ತಂದಿತು" ಎಂದು ಹೇಳಿದರು.
"ಸಿಂಧೂರ ಅಳಿಸಿ ಹಾಕಿದ್ರೆ ಅವರಿಗೆ ಮುಂದೇನಾಗುತ್ತೆ ಎಂಬುದು ಈಗ ಗೊತ್ತಾಗಿದೆ. ಅಪರೇಷನ್ ಸಿಂಧೂರ ದೇಶದ ಹೆಣ್ಣುಮಕ್ಕಳಿಗೆ ಸಮರ್ಪಣೆ. ಭಾರತ ಇಂತಹದ್ದೊಂದು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೆ ಎಂದು ಉಗ್ರವಾದಿಗಳು ಕನಸಿನಲ್ಲಿಯೂ ಊಹಿಸರಲಿಲ್ಲ. ಅವರಿಗೆಲ್ಲ ಈಗ ತಕ್ಕ ಉತ್ತರ ಕೊಟ್ಟಿದ್ದೇವೆ" ಎಂದು ಹೇಳಿದರು.
"ನಮ್ಮ ದಾಳಿಗೆ ಹೆದರಿದ ಪಾಕ್ ಇಡೀ ಜಗತ್ತಿನ ಮುಂದೆ ಕಣ್ಣೀರು ಹಾಕಿದೆ. ಉಗ್ರವಾದಿಗಳು ಅಡಗಿ ಕುಳಿತಿದ್ದ ಅಡಗುತಾಣಗಳನ್ನು ಹುಡುಕಿ ಛಿದ್ರಗೊಳಿಸಿದ್ದೇವೆ. 'ಆಪರೇಷನ್ ಸಿಂಧೂರ' ಇಲ್ಲಿಗೆ ಮುಗಿದಿಲ್ಲ, ಸದ್ಯಕ್ಕೆ ನಿಂತಿದೆ ಅಷ್ಟೇ. ಪಾಕ್ ಮೇಲೆ ಭವಿಷ್ಯದ ನಿರ್ಧಾರಗಳು ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ" ಎಂದು ಪ್ರಧಾನಿ ಹೇಳಿದರು.