ಮಹಾಕುಂಭವನ್ನು ಟೀಕಿಸುತ್ತಿರುವವರು ರಸಹ್ಯವಾಗಿ ಪುಣ್ಯಸ್ನಾನ ಮಾಡುತ್ತಿದ್ದಾರೆ; ವಿಪಕ್ಷಗಳ ಆರೋಪಕ್ಕೆ Yogi Adityanath ಖಡಕ್ ತಿರುಗೇಟು

Yogi Adityanath
Published on

ಲಖನೌ: ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ತಿರುಗೇಟು ನೀಡಿದ್ದು, ಇವರುಗಳ ಹೇಳಿಕೆಯೂ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಕಿಡಿಕಾರಿದ್ದಾರೆ.

ಉತ್ತರಪ್ರದೇಶ ವಿಧಾನಸಭೆಯಲ್ಲಿ ಈ ಕುರಿತಾಗಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath)​, ಮಹಾ ಕುಂಭವನ್ನು ಕೆಡಿಸುವ ಪ್ರಯತ್ನವಿದೆ. ಈ ಮಹಾ ಕುಂಭವನ್ನು ಸರ್ಕಾರ ಆಯೋಜಿಸಿಲ್ಲ, ಇದು ಸಮಾಜದಿಂದ ಆಯೋಜಿಸಲಾದ ಕಾರ್ಯಕ್ರಮವಾಗಿದೆ. ಅಪಪ್ರಚಾರದ ನಡುವೆಯೂ ಮಹಾ ಕುಂಭಮೇಳವನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ.

ಮಹಾಕುಂಭಕ್ಕೆ ಈವರೆಗೂ 56 ಕೋಟಿ ಜನರು ಭೇಟಿ ನೀಡಿದ್ದು, ವಿಪಕ್ಷಗಳು ಆಧಾರರಹಿತ ಆರೋಪ ಮಾಡುವ ಮೂಲಕ ಜನರ ನಂಬಿಕೆಗಳನ್ನು ಹಾಳುಮಾಡುವ ಕೆಲಸ ಮಾಡುತ್ತಿವೆ. ಈ ಕಾರ್ಯಕ್ರಮವು ಸಮಾಜಕ್ಕೆ ಸಂಬಂಧಿಸಿದ್ದು, ಸರ್ಕಾರವು ತನ್ನ ಜವಾಬ್ದಾರಿಗಳನ್ನು ಪೂರ್ಣಗೊಳಿಸಲು ಒಂದು ಸೇವಕನಂತೆ ಕೆಲಸ ಮಾಡುತ್ತಿದೆ. 

ಮಹಾಕುಂಭ ಮೇಳದ ಕುರಿತು ಹೇಳಿಕೆ ನೀಡುತ್ತಿರುವ ನಾಯಕರುಗಳು ರಹಸ್ಯವಾಗಿ ಅಲ್ಲಿಗೆ ಭೇಟಿ ನೀಡಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಸನಾತನ ಧರ್ಮವನ್ನು ಗುರಿಯಾಗಿಸಿ ಈ ನಾಯಕರುಗಳು ನೀಡುತ್ತಿರುವ ಹೇಳಿಕೆಗಳು ಜನರ ನಂಬಿಕೆಯನ್ನು ಹಾಳುಮಾಡುತ್ತಿವೆ. ಇದು ಯಾವ ರೀತಿಯ ಹೇಳಿಕೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ (Yogi Adityanath) ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net