More

    ಯುಎಸ್ ಓಪನ್‌ಗೆ ಆಟಗಾರರಿಂದಲೇ ವಿರೋಧ!

    ನ್ಯೂಯಾರ್ಕ್: ಮುಂಬರುವ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಯುಎಸ್ ಓಪನ್ ಭವಿಷ್ಯದ ಬಗ್ಗೆ ಸಂಘಟಕರು ಈ ವಾರ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಇದರ ನಡುವೆ ಟೂರ್ನಿಯ ಆಯೋಜನೆಗೆ ಪ್ರಮುಖ ಆಟಗಾರರಿಂದಲೇ ವಿರೋಧ ವ್ಯಕ್ತವಾಗಿದೆ. ವಿಶ್ವ ನಂ.1 ಆಟಗಾರ ನೊವಾಕ್ ಜೋಕೊವಿಕ್, ಸ್ಪೇನ್ ತಾರೆ ರಾಫೆಲ್ ನಡಾಲ್ ಮತ್ತು ವಿಶ್ವ ನಂ. 1 ಆಟಗಾರ್ತಿ ಆಶ್ಲೆಗ್ ಬಾರ್ಟಿ, ವಿಶ್ವ ನಂ. 2 ಆಟಗಾರ್ತಿ ಸಿಮೋನಾ ಹಲೆಪ್ ಮತ್ತಿತರರು ಕರೊನಾ ಹಾವಳಿಯ ನಡುವೆ ಟೂರ್ನಿ ಆಯೋಜಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಗೋಕರ್ಣದ ಬೀಚ್ ಕ್ರಿಕೆಟ್‌ಗೆ ಮನಸೋತ ಐಸಿಸಿ!

    ಈ ವರ್ಷದ ವಿಂಬಲ್ಡನ್ ಟೂರ್ನಿ ರದ್ದುಗೊಂಡಿದ್ದರೆ, ಫ್ರೆಂಚ್​ ಓಪನ್ ಸೆಪ್ಟೆಂಬರ್‌ಗೆ ಮುಂದೂಡಿಕೆಯಾಗಿದೆ. ಯುಎಸ್ ಓಪನ್ ಟೂರ್ನಿಯನ್ನು ನಿಗದಿಯಂತೆಯೇ ಆಗಸ್ಟ್ 31ರಂದು ಆರಂಭಿಸುವ ಬಗ್ಗೆ ಸಂಘಟಕರು ಸಿದ್ಧತೆಯಲ್ಲಿದ್ದಾರೆ. ಆದರೆ ಕರೊನಾ ವೈರಸ್‌ನಿಂದ ಅತಿಹೆಚ್ಚು ತೊಂದರೆಗೆ ಒಳಗಾಗಿರುವ ಅಮೆರಿಕದಲ್ಲಿ ಟೂರ್ನಿಗೆ ಸಾಕಷ್ಟು ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಕೂಡ ಸಂಘಟಕರು ಸಿದ್ಧವಾಗಿದ್ದಾರೆ.

    ಇದನ್ನೂ ಓದಿ: ಸುಶಾಂತ್ ಬ್ಯಾಟಿಂಗ್​ ಶೈಲಿಗೆ ಫಿದಾ ಆಗಿದ್ದ ಸಚಿನ್..!

    ಸೆರ್ಬಿಯಾ ಆಟಗಾರ ಜೋಕೊವಿಕ್, ಯುಎಸ್ ಓಪನ್‌ನಿಂದ ಹೊರಗುಳಿಯುವ ಬಗ್ಗೆ ಕಳೆದ ವಾರ ಮಾತನಾಡಿದ್ದರು. ನಡಾಲ್ ಕೂಡ ಸುರಕ್ಷಿತ ವಾತಾವರಣವಿದ್ದರೆ ಮಾತ್ರ ಆಡುವೆ ಎಂದಿದ್ದರು. ಇದೀಗ ಆಶ್ಲೆಗ್ ಬಾರ್ಟಿ, ‘ಮತ್ತೆ ಟೆನಿಸ್ ಆಡಲು ಕಾತರವಿದ್ದರೂ, ಸುರಕ್ಷತೆಗೆ ಮೊದಲ ಆದ್ಯತೆ. ನನ್ನ ಮಾತ್ರ ನನ್ನ ತಂಡದ ಸುರಕ್ಷತೆಯ ಬಗ್ಗೆಯೂ ಚಿಂತೆ ಇದೆ’ ಎಂದಿದ್ದಾರೆ. ಯುಎಸ್ ಓಪನ್‌ನಲ್ಲಿ ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯಗಳಿಲ್ಲದೆ ನೇರವಾಗಿ ಪ್ರಧಾನ ಸುತ್ತಿನ ಪಂದ್ಯಗಳು ನಿಗದಿಯಾಗಿದ್ದು, ಡಬಲ್ಸ್‌ನಲ್ಲೂ 64ಕ್ಕೆ ಬದಲಾಗಿ ಕೇವಲ 24 ಜೋಡಿಗಳಿಗೆ ಅವಕಾಶ ಲಭಿಸಲಿದೆ. ಟೂರ್ನಿಗೆ ಪೂರ್ವಭಾವಿಯಾಗಿ ನಿಗದಿಯಾಗಿರುವ ಸಿನ್ಸಿನಾಟಿ ಮಾಸ್ಟರ್ಸ್‌ ಕೂಡ ನ್ಯೂಯಾರ್ಕ್‌ನಲ್ಲೇ ನಡೆಯಲಿದೆ ಎನ್ನಲಾಗಿದೆ.

    ಇದನ್ನೂ ಓದಿ: ಪ್ರೇಕ್ಷಕರಿಲ್ಲದ ಐಪಿಎಲ್ ಅತಿಥಿಗಳಿಲ್ಲದ ಮದುವೆ ಮನೆ ಇದ್ದಂತೆ ಎಂದು ಇರ್ಫಾನ್ ಪಠಾಣ್ ಹೇಳಿದ್ದೇಕೆ..?

    ಫ್ರೆಂಚ್​ ಓಪನ್ ಸ್ವರೂಪ ಬದಲು?

    ಯುಎಸ್ ಓಪನ್‌ಗೆ ಆಟಗಾರರಿಂದಲೇ ವಿರೋಧ!

    ಸೆಪ್ಟೆಂಬರ್ 20ರಿಂದ ಅಕ್ಟೋಬರ್ 4ರವರೆಗೆ ಮರುನಿಗದಿಯಾಗಿರುವ ಫ್ರೆಂಚ್​ ಓಪನ್ ಕ್ಲೇ-ಕೋರ್ಟ್ ಟೂರ್ನಿಯ ಸ್ವರೂಪ ಬದಲಾವಣೆ ಕಾಣುವ ನಿರೀಕ್ಷೆ ಇದೆ. ಟೂರ್ನಿ ನಿಗದಿಯಂತೆಯೇ ನಡೆದರೂ, ಸ್ವಲ್ಪ ಕಿರಿದಾಗಿರುವ ಸಾಧ್ಯತೆ ಗೋಚರಿಸಿದೆ. ಸಿಂಗಲ್ಸ್ ಡ್ರಾದಲ್ಲಿ 128ಕ್ಕೆ ಬದಲಾಗಿ 96 ಆಟಗಾರರಷ್ಟೇ ಕಣಕ್ಕಿಳಿಯಲಿದ್ದರೆ, ಮಿಶ್ರ ಡಬಲ್ಸ್ ವಿಭಾಗದ ಸ್ಪರ್ಧೆ ಇರುವುದಿಲ್ಲ ಎನ್ನಲಾಗಿದೆ.

    ಅಮ್ಮನಾದ ಟೆನಿಸ್ ತಾರೆ ಸಿಬುಲ್ಕೋವಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts