

ಉಳ್ಳಾಲ: ಪ್ರಕೃತಿ ರಕ್ಷಣೆ ಜವಾಬ್ದಾರಿಯುತ ಕಾರ್ಯ, ಗಿಡ ನೆಡುವುದು ಪ್ರಕೃತಿ ಮಾತೆಗೆ ಮಾಡುವ ದೊಡ್ಡ ಪೂಜೆ. ಒಂದು ದಿಡ ನೆಟ್ಟರೂ ಅದನ್ನು ರಕ್ಷಿಸೋಣ, ಪ್ರಕೃತಿ ಬಗ್ಗೆ ನಿಗಾ ನಿರ್ಲಕ್ಷೃ ತಾಳುವುದು ನಮ್ಮ ದಡ್ಡತನ ಎಂದು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಅಭಿಪ್ರಾಯಪಟ್ಟರು.
ಕೊಣಾಜೆ ಮಂಗಳಗಂಗೋತ್ರಿ ಜೆಸಿಐ ವತಿಯಿಂದ ಬುಧವಾರ ಕೊಣಾಜೆ ಲಯನ್ಸ್ ಮುಕ್ತಿಭೂಮಿಯಲ್ಲಿ ವಿಶ್ವ ಪರಿಸರ ದಿನ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೆಸಿಐ ಮಾಜಿ ಅಧ್ಯಕ್ಷ ಡಾ.ನರಸಿಂಹಯ್ಯ ಎನ್.ಮಾತನಾಡಿ, ಈ ವರ್ಷ ಬೇಸಿಗೆ ಕಾಲದಲ್ಲಿ ಉಷ್ಣಾಂಶದಲ್ಲಿ ಭಾರತ ದಾಖಲೆ ಬರೆದಿದೆ. ಮರ ಕುಡಿಯುವುದು, ನದಿಗಳಿಗೆ ಕೈಗಾರಿಕಾ ಮಲಿನ ಬಿಡುವುದು, ನೆಲಕ್ಕೆ ಇಂಟರ್ ಲಾಕ್ ಅಳವಡಿಸುವುದು ಪ್ರಕೃತಿಗೆ ಭೂಷಣವಲ್ಲ ಪ್ರಕೃತಿ ಧರ್ಮ ಎಲ್ಲ ಧರ್ಮಗಳಿಗೆ ಗುರು ಎಂದರು.
ಜೆಸಿಐ ಮಂಗಳಗಂಗೋತ್ರಿ ಅಧ್ಯಕ್ಷೆ ಕವಿತಾ, ಕೊಣಾಜೆ ಗ್ರಾಪಂ ಸದಸ್ಯೆ ವೇದಾವತಿ ಗಟ್ಟಿ, ಸೇವಾ ಪ್ರತಿನಿಧಿಗಳಾದ ಸರಿತಾ, ಸವಿತಾ, ಚಿತ್ತರಂಜನ್, ಲೀಲಾ, ವಿಪತ್ತು ನಿರ್ವಹಣಾ ಘಟಕ ಕಾರ್ಯದರ್ಶಿ ಸುರೇಶ್, ಅನಿತಾ ಕೋಟ್ಯಾನ್, ಗಣೇಶ್ ಗಟ್ಟಿ, ಹರಿಪ್ರಸಾದ್, ಮಮತಾ, ಶಕೀಲಾ, ಸರಿತಾ, ಕವಿತಾ, ಮಿನಿ ಟೀಚರ್, ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಸುಚಿತ್ರಾ, ಪವಿತ್ರಾ ಉಪಸ್ಥಿತರಿದ್ದರು.
ವಿಪತ್ತು ನಿರ್ವಹಣಾ ಘಟಕಾಧ್ಯಕ್ಷೆ ಪೂರ್ಣಿಮಾ ಶೆಟ್ಟಿ ಸ್ವಾಗತಿಸಿ, ಸೇವಾ ಪ್ರತಿನಿಧಿ ನೌಷಾದ್ ಕೊಣಾಜೆ ವಂದಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮೇಲ್ವಿಚಾರಕ ಮಾಧವ ಕಾರ್ಯಕ್ರಮ ನಿರೂಪಿಸಿದರು.
ಪರಿಸರಕ್ಕೆ ಅಪಚಾರ ಆಗುವ ಮೂಲಕ ಮನುಷ್ಯ ಪ್ರಕೃತಿಗೆ ವಿರುದ್ಧವಾಗಿ ನಿಂತಿದ್ದಾನೆ. ಪರಿಸರ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರ ಪ್ರಕ್ರಿಯೆ ಆಗಿರಬೇಕು. ಪ್ರತಿಯೊಬ್ಬರೂ ಮನೆಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು.- ಕವಿತಾ ಅಧ್ಯಕ್ಷೆ, ಜೆಸಿಐ ಮಂಗಳಗಂಗೋತ್ರಿ