ಮನೆಯಲ್ಲಿ ಈ ಸಸ್ಯವನ್ನು ಬೆಳೆಯಿರಿ ಇದು ನಿಮ್ಮ ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ! | Vasthu tips

untitled-design-2025-10-07t105515037-68e4a44f61c3e
Published on

Vasthu tips: ವಾಸ್ತು ಶಾಸ್ರ್ರದ ಪ್ರಕಾರ, ಮನೆಯಲ್ಲಿ ಕೆಲವೊಂದು ಗಿಡ ಅಥವಾ ಮರ ನೆಡುವುದರಿಂದ ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಸಕರಾತ್ಮಕ ಶಕ್ತಿ ತುಂಬಿರುತ್ತದೆ ಎಂದು ನಂಬಲಾಗುತ್ತದೆ. ಈ ಶುಭ ಸಸ್ಯಗಳಲ್ಲಿ ಒಂದಾದ ಮಲ್ಲಿಗೆ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಇದರ ಸುಗಂಧವು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಪ್ರೀತಿ, ಶಾಂತಿ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸೂಚಿಸುತ್ತದೆ.

ಮಲ್ಲಿಗೆ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯ ಸದಸ್ಯರಲ್ಲಿ ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ ಮತ್ತು ಮನಸ್ಸನ್ನು ಸಂತೋಷವಾಗಿರಿಸುತ್ತದೆ. ಈ ಸಸ್ಯವು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಆಧ್ಯಾತ್ಮಿಕವಾಗಿಯೂ ಸಹ ಬಹಳ ಪ್ರಯೋಜನಕಾರಿಯಾಗಿದೆ.

ಮಲ್ಲಿಗೆ ಗಿಡವನ್ನು ಮನೆಯಲ್ಲಿ ನೆಡುವುದರಿಂದಾಗುವ ಪ್ರಯೋಜನಗಳೇನು?

1. ಧನಾತ್ಮಕ ಶಕ್ತಿ ಮತ್ತು ಶಾಂತಿ

ಮನೆಯಲ್ಲಿ ಮಲ್ಲಿಗೆ ಗಿಡವನ್ನು ನೆಡುವುದರಿಂದ ಇದರ ಸುಗಂಧವು ಮನಸ್ಸನ್ನು ಶಾಂತಗೊಳಿಸಿ, ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ಇದು ಮನೆಯಲ್ಲಿರುವ ಜನರಿಗೆ ಸಕರಾತ್ಮಕ ಪರಿಣಾಮ ಬೀರುತ್ತವೆ. ಹಾಗೆಯೇ ಇದು ಮನೆಯಲ್ಲಿ ಸಾಮರಸ್ಯ ಮತ್ತು ಸೌಹಾರ್ದದ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

2. ನಿದ್ರೆ ಮತ್ತು ಏಕಾಗ್ರತೆ

ಮಲ್ಲಿಗೆ ಗಿಡವನ್ನು ಮನೆಯ ಓದುವ ಕೋಣೆಯಲ್ಲಿ ನೆಡುವುದರಿಂದ ವಿದ್ಯಾರ್ಥಿಗಳಿಗೆ ಒತ್ತಡವನ್ನು ಕಡಿಮೆ ಮಾಡಿ ಅಧ್ಯಯನದಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಉತ್ತಮ ನಿದ್ರೆಯನ್ನು ನೀಡಿ ಮನಸ್ಸನ್ನು ಕೇಂದ್ರೀಕರಿಸುತ್ತದೆ.

3. ಸಂಬಂಧಗಳಲ್ಲಿ ಸಾಮರಸ್ಯ

ನಿಮ್ಮ ಕುಟುಂಬದಲ್ಲಿ ಸದಸ್ಯರೊಂದಿಗೆ ಯಾವುದೇ ರೀತಿಯಲ್ಲಿ ಭಿನ್ನಾಭಿಪ್ರಾಯಗಳು ಇದ್ದರೆ, ಈ ಗಿಡವನ್ನು ನೆಡುವುದು ಸಹಾಯವಾಗುತ್ತದೆ. ಇದು ಮನೆ ಜನರೊಂದಿಗೆ ಸಂಬಂಧವನ್ನು ಬಲಪಡಿಸುತ್ತದೆ.

4. ಧನ ಮತ್ತು ಸಮೃದ್ಧಿ

ಮನೆಯ ಮುಖ್ಯ ಬಾಗಿಲಿನ ಎಡಭಾಗದಲ್ಲಿ ಮಲ್ಲಿಗೆ ಗಿಡವನ್ನು ನೆಡುವುದರಿಂದ ಲಕ್ಷ್ಮೀದೇವಿಯ ಕೃಪೆಯಿಂದ ಧನದ ಕೊರತೆ ಉಂಟಾಗುವುದಿಲ್ಲ. ಇದು ಆರ್ಥಿಕ ಸ್ಥಿರತೆ ಮತ್ತು ವೃತ್ತಿಪರ ಯಶಸ್ಸನ್ನು ತರುತ್ತದೆ.

5. ಆರೋಗ್ಯ ಮತ್ತು ಆಧ್ಯಾತ್ಮಿಕತೆ

ಮನೆಗಳಲ್ಲಿ ಈ ಗಿಡವನ್ನು ನೆಡುವುದರಿಂದ ಗಾಳಿಯನ್ನು ಶುದ್ಧಗೊಳಿಸಿ, ಧ್ಯಾನಕ್ಕೆ ಸಹಾಯ ಮಾಡುತ್ತದೆ. ಇದರ ಸುಗಂಧವು ಮಾನಸಿಕ ಸ್ಪಷ್ಟತೆ, ವಿಶ್ರಾಂತಿ ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗೆಯೇ ಪೂಜೆಗೆ ಉಪಯುಕ್ತವಾಗಿ, ದೈವೀ ಆಶೀರ್ವಾದಗಳನ್ನು ಆಕರ್ಷಿಸುತ್ತದೆ.

ಮಲ್ಲಿಗೆ ಗಿಡದ ಧಾರ್ಮಿಕ ಮಹತ್ವ

ಮನೆಗಳಲ್ಲಿ ಮಲ್ಲಿಗೆ ಗಿಡವನ್ನು ನೆಡುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಶಿವ, ವಿಷ್ಣು ಮತ್ತು ಲಕ್ಷ್ಮಿ ಪೂಜೆಯ ಸಮಯದಲ್ಲಿ ಮಲ್ಲಿಗೆ ಹೂವುಗಳನ್ನು ಬಳಸುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಈ ಹೂವುಗಳು ಸುತ್ತಮುತ್ತಲಿನ ಪರಿಸರವನ್ನು ಶುದ್ಧೀಕರಿಸುತ್ತವೆ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ. ಗುರುವಾರ ಮತ್ತು ಶುಕ್ರವಾರ ಪೂಜೆ ಮಾಡುವುದರಿಂದ ಕುಟುಂಬದ ಸದಸ್ಯರಿಗೆ ಲಕ್ಷ್ಮೀ ದೇವಿಯ ವಿಶೇಷ ಆಶೀರ್ವಾದ ದೊರೆತಯುತ್ತದೆ ಎಂದು ನಂಬಲಾಗಿದೆ.

ಮಲ್ಲಿಗೆ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು?

ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ನೆಡುವುದು ಉತ್ತಮ. ದಕ್ಷಿಣ ಅಥವಾ ದಕ್ಷಿಣ-ಪೂರ್ವ ದಿಕ್ಕುಗಳನ್ನು ತಪ್ಪಿಸಿ, ಏಕೆಂದರೆ ಅದು ಅಸ್ಥಿರತೆಯನ್ನು ತರಬಹುದು. ಶ್ವೇತ ಮಲ್ಲಿಗೆ ತಳಿ ಶುಭಕರ. ಹೀಗೆ ಮಾಡುವುದರಿಂದ ನಿಮ್ಮ ಮನೆ ಮತ್ತು ಸುತ್ತ-ಮುತ್ತಲಿನ ವಾತಾವರಣವು ಶಾಂತಿಯುತ ಹಾಗೂ ಸಂತೋಷದಾಯಕವಾಗಿ ಇರುತ್ತದೆ. ಆದರಿಂದ ಈ ಗಿಡವನ್ನು ಸೂರ್ಯನ ಬೆಳಕು ಹಾಗೂ ಗಾಳಿ ಬರುವಂತಹ ಜಾಗದಲ್ಲಿ ಇರಿಸಿ. ಇದರಿಂದ ಮನೆಗೆ ಶುಭಫಲ ದೊರೆಯುತ್ತದೆ. (ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net