

Vastu tips: ಪ್ರತಿಯೊಬ್ಬ ಮನುಷ್ಯನೂ ಕೂಡ ಸಂಪತ್ತನ್ನು ಹೊಂದಬೇಕು ಎಂದು ಭಾವಿಸುತ್ತಾನೆ. ಕೆಲವೊಮ್ಮೆ ಎಷ್ಟೇ ಕಷ್ಟ ಪಟ್ಟು ದುಡಿದರೂ, ಅವರಲ್ಲಿ ಹಣ ನಿಲ್ಲುವುದಿಲ್ಲ. ಸಾಲ, ಭಾದೆ, ಆರೋಗ್ಯದಲ್ಲಿ ಏರುಪೇರು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಒಳಗಾಗಲು ಪ್ರಾರಂಭಿಸುತ್ತಾನೆ. ಈ ಎಲ್ಲಾ ಸಮಸ್ಯೆಗಳು ನಿಮ್ಮಲ್ಲಿ ಗೋಚರಿಸಿಕೊಳ್ಳುತ್ತಿದ್ದರೆ ಇದು ನಿಮ್ಮ ಮನೆಯ ವಾಸ್ತುವಿನಲ್ಲಿ ದೋಷ ಇದೆ ಎಂದು ತಿಳಿದುಬರುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ, ಪ್ರತಿಯೊಂದು ವಸ್ತುವು ಕೆಲವು ಶಕ್ತಿಯೊಂದಿಗೆ ಸಂಬಂಧವನ್ನು ಹೊಂದಿರುತ್ತವೆ. ಹಾಗಾಗಿ ನೀವು ಬೆಳ್ಳಿ ನವಿಲನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಜೀವನದಲ್ಲಿ ಪ್ರಗತಿ, ಸಂತೋಷ, ಸಮೃದ್ಧಿ ಸೃಷ್ಟಿಯಾಗುತ್ತದೆ. ಹಾಗಾದರೆ, ನಿಮ್ಮ ಮನೆಯಲ್ಲಿ ಬೆಳ್ಳಿ ನವಿಲನ್ನು ಇಡುವುದರಿಂದ ಏನೆಲ್ಲಾ ಪ್ರಯೋಜನ ಎಂದು ತಿಳಿಯೋಣ ಬನ್ನಿ....
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದೇವರ ಕೋಣೆಯಲ್ಲಿ ಬೆಳ್ಳಿ ನವಿಲನ್ನು ಇಡುವುದರಿಂದ ಇದು ನಿಮ್ಮ ಮನೆಯಲ್ಲಿರುವ ನಕರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಮೇಲೆ ವಿಷ್ಣು ಹಾಗೂ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಬೆಳ್ಳಿ ನವಿಲನ್ನು ಇಡುವುದರಿಂದ ಸಂತೋಷ, ಸಮೃದ್ಧಿ ಮಾನಸಿಕ ಶಾಂತಿ ಹೆಚ್ಚಾಗುತ್ತದೆ.
ನಿಮ್ಮ ಮನೆ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಒಂದು ಚಿಕ್ಕ ಬೆಳ್ಳಿ ನವಿಲನ್ನು ನಿಮ್ಮ ಮನೆಯಲ್ಲಿ ಇರಿಸಿ. ಇದು ನಿಮ್ಮ ಮನೆಯಲ್ಲಿ ಹಣ ಇರುವಂತೆ ಮಾಡುತ್ತದೆ. ಹಾಗೆಯೇ ಬೆಳ್ಳಿ ನವಿಲನ್ನು ತಿಜೋರಿ ಹಾಗೂ ಕಪಾಟಿನಲ್ಲಿ ಇರಿಸಿ ಇದು ಆರ್ಥಿಕ ಪ್ರಯೋಜನಗಳನ್ನು ತರುವುದರೊಂದಿಗೆ ಹಣವನ್ನು ಕಾಯ್ದಿರಿಸುವಂತೆ ಮಾಡುತ್ತದೆ.
ಕೆಲವೊಮ್ಮೆ ಮನುಷ್ಯನು ಕಷ್ಟಪಟ್ಟು ಕೆಲಸ ಮಾಡುತ್ತಾನೆ ಆದರೆ ನಿರೀಕ್ಷಿಸಿದ ಯಶಸ್ಸು ಸಿಗುವುದಿಲ್ಲ ಇದರಿಂದ ನೊಂದಿರುತ್ತಾರೆ. ಏಕೆಂದರೆ ಅದೃಷ್ಟ ನಮ್ಮ ಕಡೆ ಇರುವುದಿಲ್ಲ. ವಾಸ್ತುಶಾಸ್ತ್ರದ ಪ್ರಕಾರ, ಅದೃಷ್ಟವನ್ನು ಬಲಪಡಿಸಲು ಹುಣ್ಣಿಮೆ ದಿನದಂದು ಬೆಳ್ಳಿ ನವಿಲನ್ನು ತಂದು ತಿಜೋರಿಯಲ್ಲಿ ಇಡಬೇಕು ಇದು ಅದೃಷ್ಟವನ್ನು ತರಲು ಪ್ರೇರೇಪಿಸುತ್ತದೆ.
ನೀವು ವ್ಯವಹಾರದಲ್ಲಿ ನಿರಂತರ ತೊಂದರೆಯನ್ನು ಅನುಭವಿಸುತ್ತಿದ್ದರೆ ನೀವು ನಕರಾತ್ಮಕ ಶಕ್ತಿಗೆ ಒಳಗಾಗಿದ್ದೀರ ಎಂದು ತಿಳಿದು ಬರುತ್ತದೆ. ಆದರಿಂದ ನೀವು ಕಚೇರಿ, ಮನೆಯಲ್ಲಿ ಕುಳಿತುಕೊಳ್ಳುವ ಜಾಗದಲ್ಲಿ ಬೆಳ್ಳಿ ನವಿಲನ್ನು ಇರಿಸಿ. ಇದು ನಿಮ್ಮ ಪ್ರಗತಿಯನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ.
ಪ್ರತಿಯೊಂದು ಮನೆಯಲ್ಲೂ ಸಣ್ಣ ಪುಟ್ಟ ವಿಚಾರಕ್ಕೂ ಗಂಡ ಹೆಂಡತಿ ನಡುವೆ ಜಗಳವಾಗುತ್ತಿರುತ್ತದೆ. ಈ ವಾದದಿಂದ ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ವಾದವು ಬಿಕ್ಕಟ್ಟಿಗೆ ಹೋಗಿ ಸಂಬಂಧಗಳನ್ನೇ ಮುರಿದುಕೊಳ್ಳುವಷ್ಟು ಮುಂದುವರೆಯುತ್ತದೆ. ಹಾಗಾಗಿ ಬೆಳ್ಳಿ ನವಿಲನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಇಬ್ಬರ ನಡುವಿನ ಪ್ರೀತಿ ಹೆಚ್ಚಾಗುತ್ತದೆ. (ಏಜೆನ್ಸೀಸ್)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.