ಪಾರ್ಕ್​ನಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಪಿಟ್​ಬುಲ್​ ನಾಯಿ ದಾಳಿ..

pitbull1
ಸಾಂದರ್ಭಿಕ ಚಿತ್ರ
Published on

ಗಾಜಿಯಾಬಾದ್​: ಪಾರ್ಕ್​ನಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಪಿಟ್​ಬುಲ್​ ನಾಯಿ ದಾಳಿ ನಡೆಸಿದ ಭೀಕರ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ.

ಈ ದಾಳಿಯಲ್ಲಿ ಆಯುಷ್‌(11)​ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಮಗುವಿನ ತಂದೆ ರಾಕೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.

ghaziabad

ಘಟನೆ ಹಿನ್ನೆಲೆ:
ಪೊಲೀಸರ ಪ್ರಕಾರ, ಮೋದಿನಗರದ ಡಬಲ್ ಸ್ಟೋರಿ ಕಾಲೋನಿಯಲ್ಲಿ ವಾಸಿಸುವ ರಾಕೇಶ್ ತನ್ನ ಮಗನ ಜತೆಗೆ ಪಾರ್ಕ್‌ನಲ್ಲಿ ಆಟವಾಡುತ್ತಿದ್ದರು. ಇದೇ ವೇಳೆ ಅಕ್ಕಪಕ್ಕದಲ್ಲಿ ವಾಸವಾಗಿರುವ ರಿಂಕು ಎಂಬಾತ ತನ್ನ ಪಿಟ್‌ಬುಲ್ ನಾಯಿಯನ್ನು ತಂದು ಪಾರ್ಕ್‌ನಲ್ಲಿ ಬಿಟ್ಟಿದ್ದಾನೆ. ಸ್ವಲ್ಪ ಸಮಯದಲ್ಲೇ ಈ ನಾಯಿಯು ಆಯುಷ್ ಮೇಲೆ ದಾಳಿ ಮಾಡಿದ್ದು, ಪಾರ್ಕ್‌ನಲ್ಲಿದ್ದ ಜನರು ತನ್ನ ಮಗುವನ್ನು ರಕ್ಷಿಸುವವರೆಗೂ ನಾಯಿಯು ಬಾಲಕನ ಮುಖ, ತಲೆ ಮತ್ತು ಎದೆ ಮೇಲೆ ಆಳವಾದ ಗಾಯಗಳನ್ನು ಮಾಡಿತ್ತು ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

ಕೂಡಲೇ ತರಾತುರಿಯಲ್ಲಿ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ನಾಯಿಯ ದಾಳಿಯಿಂದಾಗಿ ಬಾಲಕನ ಸ್ಥಿತಿ ಗಂಭೀರವಾಗಿದ್ದು, ತಂದೆಯ ದೂರಿನ ಮೇರೆಗೆ ನಾಯಿ ಮಾಲೀಕ ರಿಂಕು ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net