ಶಿವರಾತ್ರಿ ಹಿನ್ನೆಲೆ ಸೋಮನಾಥ ದೇವಸ್ಥಾನಕ್ಕೆ ಮಗನ ಜತೆ ಮುಕೇಶ್​ ಅಂಬಾನಿ ಭೇಟಿ: 1.51 ಕೋಟಿ ರೂ. ದೇಣಿಗೆ

Mukesh Ambani
Published on

ನವದೆಹಲಿ: ದೇಶದ ಶ್ರೀಮಂತ ಉದ್ಯಮಿ ಹಾಗೂ ರಿಲಯನ್ಸ್​ ಇಂಡಸ್ಟ್ರೀಸ್​ನ ಮುಖ್ಯಸ್ಥ ಮುಕೇಶ್​ ಅಂಬಾನಿ ಅವರು ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಗುಜರಾತಿನ ಸೋಮನಾಥ ಮಹಾದೇವ ದೇವಸ್ಥಾನಕ್ಕೆ ನಿನ್ನೆ (ಫೆ.18) ಭೇಟಿ ನೀಡಿದರು. ತಮ್ಮ ಪುತ್ರ ಪುತ್ರ ಹಾಗೂ ರಿಲಯನ್ಸ್​ ಜಿಯೋ ಮುಖ್ಯಸ್ಥ ಆಕಾಶ್​ ಅಂಬಾನಿ​ ಜೊತೆ ಸೋಮನಾಥ ಮಹಾದೇವನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮುಕೇಶ್​ ಅಂಬಾನಿ ಅವರು ಸೋಮನಾಥ ದೇವಸ್ಥಾನದ ಟ್ರಸ್ಟ್​ಗೆ 1.51 ಕೋಟಿ ರೂ. ದೇಣಿಗೆ ನೀಡಿದರು. ಮುಕೇಶ್​ ಅಂಬಾನಿ ಮತ್ತು ಆಕಾಶ್​ ಅಂಬಾನಿ ಭೇಟಿಯ ವಿವಿಧ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ತಂದೆ ಮತ್ತು ಮಗ ವಿವಿಧ ಫೋಟೋಗಳಲ್ಲಿ ಕೈಗಳನ್ನು ಮುಗಿದು ಸೋಮನಾಥನಿಗೆ ಭಕ್ತಿಯಿಂದ ವಂದಿಸಿರುವುದು, ಲಿಂಗ ಪೂಜೆ ಮಾಡುತ್ತಿರುವುದು ಕಂಡುಬಂದಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಕೇಶ್ ಅಂಬಾನಿ ಅವರು ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ 1.5 ಕೋಟಿ ರೂ. ಕಾಣಿಕೆ ಸಲ್ಲಿಸಿದ್ದರು. ಅವರ ಪುತ್ರ ಅನಂತ್ ಅವರ ನಿಶ್ಚಿತ ವಧು ರಾಧಿಕಾ ಮರ್ಚೆಂಟ್ ಮತ್ತು ರಿಲಯನ್ಸ್ ರಿಟೇಲ್ ಲಿಮಿಟೆಡ್ ನಿರ್ದೇಶಕ ಮನೋಜ್ ಮೋದಿ ಮುಕೇಶ್​ ಅಂಬಾನಿ ಜೊತೆಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net