

ಬೆಂಗಳೂರು: ಕರೊನಾ ವೈರಸ್ ಸೋಂಕಿತನಿಗೆ ಚಿಕಿತ್ಸೆ ನೀಡಿ ಕ್ಲಿನಿಕ್ನಲ್ಲಿ ಬಚ್ಚಿಟ್ಟಿಕೊಂಡಿದ್ದ ವೈದ್ಯನನ್ನು ಮನವೊಲಿಸಿ ಕ್ವಾರಂಟೈನ್ಗೆ ಒಳಪಡಿಸಿರುವ ಘಟನೆ ನಡೆದಿದೆ.
ಹೊಂಗಸಂದ್ರದ ಕ್ಲಿನಿಕ್ನಲ್ಲಿ ವೈದ್ಯ ಇತ್ತೀಚೆಗೆ ಜ್ವರ ಬಂದ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆ ಪಡೆದ ವ್ಯಕ್ತಿಗೆ ಕರೊನಾ ಸೋಂಕು ಇರುವುದು ಪರೀಕ್ಷೆಯಿಂದ ಪತ್ತೆಯಾದ ಬಳಿಕ ಜಿಲ್ಲಾಧಿಕಾರಿ ವೈದ್ಯನನ್ನು ಪತ್ತೆ ಮಾಡಿ ಕ್ವಾರಂಟೈನ್ಗೆ ಒಳಪಡಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದ್ದರು.
ಆರೋಗ್ಯ ಇಲಾಖೆ ಸಿಬ್ಬಂದಿ ಕೂಡಲೇ ಹೊಂಗಸಂದ್ರಕ್ಕೆ ತೆರಳಿ ವೈದ್ಯನನ್ನು ಕ್ವಾರಂಟೈನ್ಗೆ ಒಳಗಾಗುವಂತೆ ತಿಳಿಸಿದರು. ಇದರಿಂದ ಹೆದರಿದ ವೈದ್ಯ ಕ್ಲಿನಿಕ್ ಬಾಗಿಲು ಮುಚ್ಚಿ ಬಚ್ಚಿಟ್ಟುಕೊಂಡಿದ್ದರು. ಮನವೊಲಿಸಿ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಬಂದರು.
ಜಿಲ್ಲಾಧಿಕಾರಿಗಳು ವೈದ್ಯನನ್ನು ಇಂದಿರಾ ನಗರದ ಇಎಸ್ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ಗೆ ಒಳಗಾಗುವಂತೆ ಸೂಚಿಸಿದರು. ಕೂಡಲೇ ಅವರನ್ನು ಇಂದಿರಾನಗರದ ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಯಿತು.