ಪತಿ ಹಾಗೂ ಮನೆಯವರಿಂದ ದೈಹಿಕ ಹಾಗೂ ಮಾನಸಿಕ ಹಿಂಸೆ

Woman Harrasment
Published on

ಪಡುಬಿದ್ರಿ: ಪತಿ ಹಾಗೂ ಆತನ ಮನೆಯವರು ದೈಹಿಕ, ಮಾನಸಿಕ ಹಿಂಸೆ ನೀಡಿರುವುದಾಗಿ ಹೆಜಮಾಡಿ ಗ್ರಾಮದ ಸುಮಯ್ಯ ಬಾನು ಎಂಬುವರು ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

2016 ಫೆ.11ರಂದು ಸುಮಯ್ಯ ಬಾನು ವಿವಾಹ ಬೆಳಪು ವಿನಯನಗರದ ಆರೀಫ್ ಎಂಬವರ ಜತೆ ನಡೆದಿತ್ತು. ಬಳಿಕ ಪತಿ ವಿದೇಶದಲ್ಲಿ ಉದ್ಯೋಗಕ್ಕೆ ತೆರಳಿದ್ದಾರೆ. ಸುಮಯ್ಯಗೆ ಅತ್ತೆ ಹಾಜಿರಾ, ಆರೀಫ್ ಸಹೋದರಿಯರಾದ ಉಮಿನಾ ಹಾಗೂ ರುಬಿನಾ ಹಾಗೂ ಸಹೋದರ ಹರ್ಷಾದ್ ನಿಂದಿಸುತ್ತಿದ್ದರು. ಪತಿ ಊರಿಗೆ ಬಂದಾಗ ವಿಷಯವನ್ನು ತಿಳಿಸಿದಾಗ ಪತ್ನಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾನೆ. ಹಿಂಸೆ ಹೆಚ್ಚಾದ್ದರಿಂದ ಏ.22ರಂದು ಮಕ್ಕಳೊಂದಿಗೆ ಸುಮಯ್ಯ ತವರು ಮನೆಗೆ ಬಂದಿದ್ದರು. ಅಲ್ಲಿಗೂ ಬಂದ ಆರೀಫ್ ಹಲ್ಲೆಗೆ ಯತ್ನಿಸಿ, ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net