ಜೀವನದಲ್ಲಿ ಪರೋಪಕಾರ ಗುಣ ಮುಖ್ಯ

gan
Published on

ಕುಂದಾಪುರ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಭವಿಷ್ಯದಲ್ಲಿ ಸತ್ಪ್ರಜೆಗಳಾಗಬೇಕು. ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯೆಗಳಿತ್ತು. ಆದರೆ ಪ್ರಸ್ತುತ ಎನ್‌ಜಿಒಗಳು, ಸಂಟನೆಗಳು ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು.

ಜೀವನದಲ್ಲಿ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಉದ್ಯೋಗ ಸಿಕ್ಕ ಬಳಿಕ ತಾವು ಕೂಡ ಅಗತ್ಯವುಳ್ಳ ಮಕ್ಕಳ ವಿದ್ಯೆಗೆ ಸಹಕಾರ ನೀಡಬೇಕು ಎಂದು ಕುಂದಾಪುರದ ಎಲ್.ಜಿ. ಫೌಂಡೇಶನ್ ವ್ಯಾನೇಜಿಂಗ್ ಟ್ರಸ್ಟಿ ಕುಂದಾಪುರದ ನಾಗರಾಜ ಡಿ.ಪಡುಕೋಣೆ ಹೇಳಿದರು.

ಜನಶಕ್ತಿ ಸೇವಾ ಟ್ರಸ್ಟ್ ನಾಡ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ಪಡುಕೋಣೆ ಟಕ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಟನೆ ನಾಡ ವಲಯದ ಸಂಯುಕ್ತ ಆಶ್ರಯದಲ್ಲಿ ನಾಡ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸವಾರಂಭದಲ್ಲಿ ವಾತನಾಡಿದರು.

ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಫಿಲಿಪ್ ಡಿಸಿಲ್ವಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಾಗಾರಾಜ್ ಡಿ.ಪಡುಕೋಣೆ ಅವರನ್ನು ಸನ್ಮಾನಿಸಲಾಯಿತು.

ಅಖಿಲ ಭಾರತ ಜನವಾದಿ ಮಹಿಳಾ ಸಂಟನೆ ನಾಡ ವಲಯಾಧ್ಯಕ್ಷೆ ಮನೋರಮ ಭಂಡಾರಿ, ಕಾರ್ಯದರ್ಶಿ ಶೋಭಾ ಕೆರೆಮನೆ, ರಾಜ್ಯ ಮುಖಂಡರಾದ ಶೀಲಾವತಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಪಡುಕೋಣೆ ಟಕಾಧ್ಯಕ್ಷ ನಾಗರಾಜ ಕುರು, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂ ಅಧ್ಯಕ್ಷ ನಾಗಾರಾಜ ರಾಯಪ್ಪನಮಠ ಮೊದಲಾದವರಿದ್ದರು.

ಡಿವೈಎಫ್‌ಐ ಪಡುಕೋಣೆ ಕಾರ್ಯದರ್ಶಿ ರಾಜೇಶ್ ಸ್ವಾಗತಿಸಿದರು. ನಾಗರಾಜ ಕುರು ವಂದಿಸಿದರು. ಜನಶಕ್ತಿ ಸೇವಾ ಟ್ರಸ್ಟ್ ನಾಡದ ಕಾರ್ಯದರ್ಶಿ ರಾಜೀವ ಪಡುಕೋಣೆ ಪ್ರಸ್ತಾವನೆಗೈದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net