ರಸ್ತೆಯಲ್ಲಿ ಹೋಗುವ ಯುವತಿಗೆ ಜಿಪ್ ಬಿಚ್ಚಿ ಕಾಟ ಕೊಡುತ್ತಿದ್ದ ಕಾಮುಕ ಅಂದರ್…

pervert
Published on

ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಮ್ಮೆದುರಿಗೆ ಯಾರಾದರು ಬಂದು ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದರೆ ಹೇಗೆನಿಸಬಹುದು? ಅಂತಹದ್ದೆ ಅನುಭವ ಬೆಂಗಳೂರು ನಗರದಲ್ಲಿ ಯುವತಿಯೋರ್ವಳಿಗೆ ಆಗಿದೆ.

ಆಕೆ ರಸ್ತೆ ಬಳಿ ನಡೆದು ಹೋಗುತ್ತಿದ್ದಾಗ ಈ ಕಾಮುಕ ಬಂದು ಕಾಟ ನೀಡಿದ್ದಾನೆ. ಈತ ಯುವತಿ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯ ವರ್ತಿಸಿದ್ದಾನೆ. ಈತ ಪಿಜಿ ಯುವತಿಯರನ್ನೆ ಟಾರ್ಗೆಟ್ ಮಾಡಿಕೊಂಡು ಬಂದು ಕಾಡಿಸುತ್ತಿದ್ದ. ಬೈಕ್ ಮೇಲೆ ಬರುತ್ತಿದ್ದ ಈ ಆರೋಪಿ, ಯುವತಿಯರಿಗೆ ಕಾಡಿಸುತ್ತಿದ್ದ.

ಜಯನಗರ 3 ನೇ ಬ್ಲಾಕ್ ನ ರಣಧೀರ ಕಂಠೀರವ ಪಾರ್ಕ್ ಬಳಿ ಈ ಘಟನೆ ನಡೆದಿದ್ದು ಕಾಮುಕನ ವಿರುದ್ದ ಪೊಲೀಸರಿಗೆ ಯುವತಿ ಮಾಹಿತಿ ನೀಡಿದ್ದಳು.  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿ ನೀಡಿದ್ದ ಮಾಹಿತಿಯನ್ನು ಆಧರಿಸಿದ ತನಿಖೆ ಶುರು ಮಾಡಿದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಆತನನ್ನು ಜೆ.ಪಿ.ನಗರ ನಿವಾಸಿ ಉಮೇಶ್(32) ಎಂದು ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net