More

    ಅತಿಯಾಸೆ ಗತಿಗೇಡು: ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳ್ಕೊಂಡ.. ಬಳಿಕ ಕಾರು-ಚೆಕ್​ ಮಾತ್ರವಲ್ಲ, ಲಾಡ್ಜ್​ನಲ್ಲಿ ಪ್ರಾಣ ಕೂಡ ಕಳ್ಕೊಂಡ..

    ಹೈದರಾಬಾದ್​: ಕರ್ನಾಟಕದಲ್ಲಂತೂ ಸದ್ಯ ಬಿಟ್​ ಕಾಯಿನ್​ ಹಗರಣದಿಂದಾಗಿ ಕ್ರಿಪ್ಟೋಕರೆನ್ಸಿ ವಿಚಾರ ಭಾರಿ ಚಲಾವಣೆಯಲ್ಲಿದೆ. ಹಗರಣದ ಹಿಂದೆ ಒಂದು ಅತಿಯಾಸೆ ಇರುತ್ತದೆ, ಆದರೆ ಇಲ್ಲೊಂದು ಪ್ರಾಣಹರಣದ ಹಿಂದೆಯೂ ಅತಿಯಾಸೆ ಇದೆ. ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಿ ಅತಿಯಾಸೆಗೆ ಬಿದ್ದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

    ಹೈದರಾಬಾದ್​ನ ಖಮ್ಮಂ ನಿವಾಸಿ ಜಿ. ರಾಮಲಿಂಗಸ್ವಾಮಿ (36) ಕ್ರಿಪ್ಟೋಕರೆನ್ಸಿಯಲ್ಲಿ ಹಣ ಕಳೆದುಕೊಂಡ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೆಲಂಗಾಣದ ಸೂರ್ಯಪೇಟೆಯ ಲಾಡ್ಜ್​ವೊಂದರಲ್ಲಿ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಲಾಡ್ಜ್​ನಲ್ಲಿ ತಂಗಿದ್ದ ವ್ಯಕ್ತಿ ಬಾಗಿಲು ಬಡಿದರೂ ತೆಗೆಯದ ಹಿನ್ನೆಲೆಯಲ್ಲಿ ಲಾಡ್ಜ್​ ಮಾಲೀಕ ಬುಧವಾರ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಸ್ಥಳಕ್ಕೆ ಬಂದ ಪೊಲೀಸರು ಲಾಡ್ಜ್​ ರೂಮ್​ ಒಳಹೊಕ್ಕು ನೋಡಿದಾಗ ರಾಮಲಿಂಗಸ್ವಾಮಿ ಶವ ಕಂಡುಬಂದಿತ್ತು. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈತ ಮಂಗಳವಾರವೇ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

    ಇದನ್ನೂ ಓದಿ: ಮದುವೆಗೆ ಅಡ್ಡಿಯಾದ ಯುವತಿ ತಂದೆ ಹತ್ಯೆ, ಪ್ರೇಮಿಸಿದ ಯುವತಿಯನ್ನು ವಿವಾಹ ಮಾಡಿಕೊಡಲು ನಿರಾಕರಣೆ

    ಪ್ರಾಣ ಕಳೆದುಕೊಳ್ಳುವ ಮುನ್ನ ಈ ವ್ಯಕ್ತಿ ಹೆಂಡತಿಗೆ ವಿಷಯ ತಿಳಿಸಲು ಡೆತ್​ನೋಟ್ ಬರೆದಿಟ್ಟಿದ್ದ. ಈತ ಇನ್ನಿಬ್ಬರು ಸ್ನೇಹಿತರ ಜತೆ ಸೇರಿ ಕ್ರಿಪ್ಟೋಕರೆನ್ಸಿ ಆ್ಯಪ್​ ಮೂಲಕ ಹಣ ಹೂಡಿಕೆ ಮಾಡಿದ್ದ. ಆರಂಭದ ಹತ್ತು ಲಕ್ಷ ರೂಪಾಯಿ ಹೂಡಿಕೆಗೆ ಒಳ್ಳೆಯ ಲಾಭ ಬಂದಿದ್ದರಿಂದ ಬಳಿಕ ಮತ್ತಷ್ಟು ಹೂಡಿಕೆ ಮಾಡಿದ್ದರು. ಆದರೆ 70 ಲಕ್ಷ ರೂ. ನಷ್ಟವಾಗಿತ್ತು.

    ಇದನ್ನೂ ಓದಿ: ಇಲ್ಲಿ ರಾತ್ರಿ ಯಾರು ಬೇಕಾದರೂ ನಿರಾತಂಕವಾಗಿ ಸಂಚರಿಸಬಹುದು; ನೈಟ್​ ವಾಕ್​ಗೆ ಇದು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ!

    ಹೂಡಿಕೆಗೆ ಬೇರೆಯವರಿಂದ ಸಾಲ ಪಡೆದಿದ್ದು, ಅವರು ಹಣ ಹಿಂದಿರುಗಿಸುವಂತೆ ಬೆನ್ನುಬಿದ್ದಿದ್ದರು. ಮಾತ್ರವಲ್ಲ ರಾಮಲಿಂಗಸ್ವಾಮಿ ಬಳಸುತ್ತಿದ್ದ ಕಾರು ಹಾಗೂ ಸಹಿ ಮಾಡಿದ್ದ ಚೆಕ್​ಗಳನ್ನೂ ಸಾಲ ಕೊಟ್ಟವರು ಕಿತ್ತುಕೊಂಡಿದ್ದರು. ಹೀಗಾಗಿ ಸಾಲದ ಹೊರೆ ಹಾಗೂ ಸಾಲಗಾರರ ಕಾಟ ತಡೆಯಲಾಗದೆ ರಾಮಲಿಂಗಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆ ವೇಳೆ ಆತನ ಸಂಬಂಧಿಕರು ತಿಳಿಸಿದ್ದಾರ.

    ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತ ಮೂರೇ ದಿನಕ್ಕೆ ಅಮ್ಮ ಇನ್ನಿಲ್ಲ; ಸಿಜೇರಿಯನ್ ಮಾಡಿದ ವೈದ್ಯರ ನಿರ್ಲಕ್ಷ್ಯ ಎಂದು ಪಾಲಕರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts