ಡಿಎಸ್​ಪಿ ಮನೆಯೇ ಮಾದಕವಸ್ತು ಮಾರಾಟದ ಕಾರಸ್ಥಾನ; ಸಿಕ್ಕಿಬಿದ್ದ ಬಾಡಿಗೆದಾರ

swamiji arrest
Published on

ಚೆನ್ನೈ: ಡಿಎಸ್​ಪಿ ಶ್ರೇಣಿಯ ಅಧಿಕಾರಿಯ ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬ ಅದನ್ನು ಮಾದಕವಸ್ತು ಮಾರಾಟದ ಕಾರಸ್ಥಾನವನ್ನಾಗಿ ಮಾಡಿಕೊಂಡು ಇದೀಗ ಸಿಕ್ಕಿಬಿದ್ದಿದ್ದಾನೆ.

ಅರುಣ್​ (40) ಬಂಧಿತ. ಚೆನ್ನೈನ ಕಿಲ್​ಪಾಕ್​ ಗಾರ್ಡನ್ಸ್​ನಲ್ಲಿರುವ ವಸತಿ ಸಮುಚ್ಚಯದಲ್ಲಿದ್ದ ಸಿಬಿ-ಸಿಐಡಿಯಲ್ಲಿ ಡಿಎಸ್​ಪಿ ಆಗಿರುವವರ ಫ್ಲ್ಯಾಟ್​ ಅನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಈ ಮನೆಯನ್ನು ಬಳಸಿಕೊಂಡು ಆತ ಚೆನ್ನೈ ನಗರದಾದ್ಯಂತ ಮಾದಕವಸ್ತು ಮಾರಾಟ ದಂಧೆ ನಡೆಸುತ್ತಿದ್ದ.

ಮಾದಕವಸ್ತು ನಿಯಂತ್ರಣ ಬ್ಯೂರೋದ (ಎನ್​ಸಿಬಿ) ಅಧಿಕಾರಿಗಳು ತಮಗೆ ಸಿಕ್ಕ ಮಾಹಿತಿಯನ್ನು ಆಧರಿಸಿ, ಫ್ಲ್ಯಾಟ್​ ಮೇಲೆ ದಾಳಿ ಮಾಡಿದರು. ಆಗ ಫ್ಲ್ಯಾಟ್​ನಲ್ಲಿದ್ದ ಒಬ್ಬನನ್ನು ಬಂಧಿಸಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದು, ಆತನಿಗಾಗಿ ಶೋಧಿಸಲಾಗುತ್ತಿದೆ. ಸಾಕಷ್ಟು ಪ್ರಮಾಣದ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರ ವಿವರವನ್ನೂ ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಿಬಿ-ಸಿಐಡಿಯಲ್ಲಿ ಡಿಎಸ್​ಪಿ ಆಗಿರುವ ಅಧಿಕಾರಿಯು ಈ ಮನೆಯ ಹತ್ತಿರ ಹೋಗುತ್ತಿರಲಿಲ್ಲ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ಬಾಡಿಗೆದಾರರು ಬಾಡಿಗೆ ಮೊತ್ತವನ್ನು ವರ್ಗಾಯಿಸುತ್ತಿದ್ದರು. ಹಾಗಾಗಿ, ಅವರಿಗೆ ಈ ಬಗ್ಗೆ ಸುಳಿವಿರಲಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net