ಕೆರೆಗೆ ಕಾಲು ಜಾರಿ ಬಿದ್ದ ವ್ಯಕ್ತಿ ಮೃತ್ಯು

IMG-20240729-WA0023
Published on

ಪುತ್ತೂರು: ಬುಳೇರಿಕಟ್ಟೆ ಬೀಡು ಸಮೀಪ ವ್ಯಕ್ತಿಯೊಬ್ಬರು ತೋಟದ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಅಗರ್ತಬೈಲು ನಿವಾಸಿ ಜಗನ್ನೋಹನ್ ರೈ (64) ಮೃತಪಟ್ಟಿದ್ದಾರೆ.

ಸೋಮವಾರ ತೋಟಕ್ಕೆ ತೆರಳು ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಕೆರೆಯ ಕೆಸರಿನಲ್ಲಿ ಸಿಲುಕಿಕೊಂಡಿದ್ದು ಮೇಲೆ ಬರಲಾಗದೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಅಗ್ನಿಶಾಮಕದಳ ಮೃತದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯರಾದ ಕೃಪಾನ್, ಗುರುಕಿರಣ್, ಆನಂದ, ರಫೀಕ್ ಮೃತದೇಹವನ್ನು ಮೇಲೆತ್ತುವಲ್ಲಿ ಸಹಕರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net