

ನವದೆಹಲಿ: ಸಾಮಾನ್ಯವಾಗಿ ಕೆಲವು ಮೆಣಸಿನಕಾಯಿಗಳನ್ನು ತಿಂದರೆ, ಕಣ್ಣು, ಮೂಗು, ಬಾಯಿಯ ಸುತ್ತಲೂ ನೀರು ಸುರಿಯಬೇಕು ಅಷ್ಟು ಖಾರವಾಗಿರುತ್ತವೆ. ಅಂತಹದ್ದೆ ಒಂದು ಮೆಣಸಿನಕಾಯಿ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ. 'ಪೆಪ್ಪರ್ ಎಕ್ಸ್' ಮೆಣಸು ವಿಶ್ವದ ಹಾಟೆಸ್ಟ್ ಮೆಣಸು ಎಂದು ವಿಶ್ವದಾಖಲೆ ಪಡೆದುಕೊಂಡಿದೆ.
'ಪೆಪ್ಪರ್ ಎಕ್ಸ್' ಕಾಳುಮೆಣಸು ಖಾರ ಮಾತ್ರವಲ್ಲದೆ ಅದರ ಆಕಾರದಲ್ಲಿಯೂ ವಿಭಿನ್ನವಾಗಿದೆ. ಈ ಮೆಣಸು 'ವಿಶ್ವದ ಹಾಟೆಸ್ಟ್ ಪೆಪ್ಪರ್' ಎಂದು ಗಿನ್ನೆಸ್ ವಿಶ್ವ ದಾಖಲೆಗಳಿಂದ ಗುರುತಿಸಲ್ಪಟ್ಟಿದೆ. ಈ ಮೆಣಸು ಅರ್ಧ ಕಚ್ಚಿದ ಮೆಣಸಿನಕಾಯಿಯಂತೆ ಕಾಣುತ್ತದೆ. ಅದರ ಈ ಮೆಣಸಿನಕಾಯಿಯ ಖಾರವನ್ನು ತಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಇದನ್ನು ವಿಶ್ವದ ಅತ್ಯಂತ ಹಾಟೆಸ್ಟ್ ಮೆಣಸು ಎಂದು ಕರೆಯಲಾಗುತ್ತದೆ.
ಪ್ರಪಂಚದಾದ್ಯಂತ ಹಲವಾರು ರೀತಿಯ ಮೆಣಸಿನಕಾಯಿಗಳಿವೆ. ಆದರೆ ಈ ಪೆಪ್ಪರ್ ಎಕ್ಸ್ ಅವೆಲ್ಲವನ್ನೂ ಹಿಂದಕ್ಕೆ ತಳ್ಳಿ ಹೊಸ ದಾಖಲೆ ಸೃಷ್ಟಿಸಿದೆ. ಇಲ್ಲಿಯವರೆಗೆ, ಕೆರೊಲಿನಾ ರೀಪರ್ ಚಿಲ್ಲಿ ಖಾರವಾದ ಮೆಣಸಿನಕಾಯಿ ಆಗಿತ್ತು. ಅದನ್ನು ಮೆಟ್ಟಿ ನಿಲ್ಲುವ ಮೂಲಕ ಗಿನ್ನಿಸ್ ದಾಖಲೆಯನ್ನೂ ನಿರ್ಮಿಸಿದೆ ಈ ಮೆಣಸಿನ ಕಾಯಿ.
ಸ್ಕೋವಿಲ್ಲೆ ಹೀಟ್ ಯೂನಿಟ್‌ಗಳು ಹೆಚ್ಚಾದಷ್ಟು ಮೆಣಸಿನಕಾಯಿ ಖಾರ ಹೆಚ್ಚಾಗಿರುತ್ತದೆ. ಕೆರೊಲಿನಾ ರೀಪರ್ ಮೆಣಸಿನಕಾಯಿ ಅಲ್ಲಿ 1.64 ಮಿಲಿಯನ್ ಯೂನಿಟ್‌ಗಳ ಸ್ಕೋವಿಲ್ಲೆ ಹೀಟ್ ಯೂನಿಟ್ ಹೊಂದಿದೆ, ಆದರೆ ಈ ಪೆಪ್ಪರ್ ಎಕ್ಸ್ 2.69 ಮಿಲಿಯನ್ ಸ್ಕೋವಿಲ್ಲೆ ಹೀಟ್ ಯೂನಿಟ್‌ಗಳನ್ನು ಹೊಂದಿದೆ. ಹೀಗಾಗಿ ಈ ಮೆಣಸಿನಕಾಯಿ ಅಷ್ಟು ಖಾರವಾದಿಗೆ ಎನ್ನಲಾಗಿದೆ.
ಈ ರೀತಿಯ ಮೆಣಸಿನಕಾಯಿಯನ್ನು ಎಡ್ ಕರಿ ಎಂಬ ವ್ಯಕ್ತಿ ಹತ್ತು ವರ್ಷಗಳ ಪರಿಶ್ರಮದ ನಂತರ ಕಂಡುಹಿಡಿದನು. ಇದರೊಂದಿಗೆ ಈ ಮೆಣಸಿನ ಮೇಲೆ ಪೇಟೆಂಟ್ ಕೂಡ ಲಭಿಸಿದೆ. ಕರಿ ಕುಟುಂಬ ಈ ಪೆಪ್ಪರ್ ಎಕ್ಸ್ ಮೆಣಸಿಗಾಗಿ ಗಾಗಿ ಶ್ರಮಿಸಿದೆ. ಇದಕ್ಕಾಗಿ ಹಲವು ಪ್ರಯೋಗಗಳನ್ನು ಮಾಡಿದರು.
ಕೆರೊಲಿನಾ ರೀಪರ್ ಅನ್ನು ತನ್ನ ಸ್ನೇಹಿತ ಮಿಚ್ ಗ್ಯಾನ್ ಕಳುಹಿಸಿದ ಮೆಣಸಿನಕಾಯಿಗಳೊಂದಿಗೆ ಕ್ರಾಸ್-ಬ್ರೆಡ್ ಮಾಡಿದ್ದು, ಅದುವರೆಗೆ ಒಂದೇ ಮೆಣಸಿನಕಾಯಿಯಾಗಿದ್ದ ಕೆರೊಲಿನಾ ಮೆಣಸಿನಕಾಯಿಗಿಂತ ಖಾರವಾದ ಮೆಣಸಿನಕಾಯಿಯನ್ನು ಕಂಡುಕೊಂಡರು. ಈ ಪ್ರಯೋಗಗಳು ಹತ್ತು ವರ್ಷಗಳ ಕಾಲ ಶ್ರಮಿಸಿದರು. ಕೊನೆಗೆ ಅವರು ಪೆಪ್ಪರ್ ಎಕ್ಸ್ ಅನ್ನು ಬೆಳೆಯುವಲ್ಲಿ ಯಶಸ್ವಿಯಾದರು, ಇದು ಕೆರೊಲಿನಾ ಪೆಪ್ಪರ್ಗಿಂದ ಖಾರವಾಗಿದೆ. ಈ ಮೆಣಸಿನಕಾಯಿಗಳನ್ನು ಮಾರಾಟ ಮಾಡಲಾಗುವುದು. ಈ ಮೆಣಸಿನಕಾಯಿ ತಿನ್ನಲು ಯಾರೂ ಮುಂದೆ ಬರುವುದಿಲ್ಲ, ಧೈರ್ಯ ಕೂಡಾ ಮಾಡುವುದಿಲ್ಲ ಅಷ್ಟು ಖಾರವಾಗಿದೆ ಎಂದು ಎಡ್ ಕರಿ ಹೇಳಿದ್ದಾರೆ.