ಓಣಂಗೆ ಸಜ್ಜಾದ ಕೇರಳದ ಜನತೆ

Ksd_Onam
Published on

ಕಾಸರಗೋಡು: ಹೂವಿನ ಹಬ್ಬ ಓಣಂಗೆ ಕೇರಳ ಸಜ್ಜಾಗಿ ನಿಂತಿದೆ. ಅತ್ತಂ ಪತ್ತ್ ಪೊನ್ನೋಣಂ ಎಂಬ ಮಾತಿನಂತೆ ಅತ್ತಂನಿಂದ ತೊಡಗಿ ಪೊನ್ನೋಣಂ ವರೆಗಿನ ಹತ್ತು ದಿವಸಗಳ ಕಾಲ ಕೇರಳದಲ್ಲಿ ಓಣಂ ಆಚರಿಸಲಾಗುತ್ತಿದೆ. ಜಾತಿ, ಮತ ಭೇದವಿಲ್ಲದೆ ಓಣಂ ಹಬ್ಬವನ್ನು ಒಟ್ಟಾಗಿ ಆಚರಿಸಲು ನಾಡಿನ ಜನತೆ ಸಜ್ಜಾಗಿ ನಿಂತಿದ್ದಾರೆ. ನಾಡಿನ ಜನತೆ ಹೂವಿನ ರಂಗೋಲಿ ರಚಿಸಿ ಮಹಾಬಲಿಯನ್ನು ಸ್ವಾಗತಿಸಲಿದ್ದಾರೆ.
ಸೆ.6ರಂದು ತೊಡಗಿ 15ರಂದು ತಿರುವೋಣಂವರೆಗೆ ಹಬ್ಬ ಆಚರಿಸಲಾಗುತ್ತಿದೆ. ಪ್ರತಿದಿನ ಒಂದೊಂದು ವಿಶೇಷತೆಯೊಂದಿಗೆ ಓಣಂ ಆಚರಿಸಲಾಗುತ್ತಿದೆ.

ಓಣಂ ಹಬ್ಬದ ಅಂಗವಾಗಿ ನಾಡಿನೆಲ್ಲಡೆ ಓಣಂ ಸಂತೆ ಆರಂಭಿಸಲಾಗಿದೆ. ಮಾರುಕಟ್ಟೆಯಲ್ಲಿ ಹೂವಿನ ಭರ್ಜರಿ ಮಾರಾಟ ನಡೆಯುತ್ತದೆ. ಓಣಂ ಬಂದರೆ ಇತರ ರಾಜ್ಯಗಳ ಹೂವಿನ ವ್ಯಾಪಾರಿಗಳಿಗೆ ಸುಗ್ಗಿಯ ಕಾಲ. ಕರ್ನಾಟಕ, ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯಲ್ಲಿ ಹೂವಿನ ವ್ಯಾಪಾರಿಗಳು ಕೇರಳಕ್ಕೆ ತೆರಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net