VIDEO| ಬಿರಿಯಾನಿಯಲ್ಲಿ ಲೆಗ್​ ಪೀಸ್​ ಸಿಕ್ಕಿಲ್ಲ ಎಂದು ಕಿರಿಕ್; ಕ್ಷಣಾರ್ಧದಲ್ಲೇ ರಣರಂಗವಾದ ಮದುವೆ ಮನೆ

UP Marriage
Published on

ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆ ಕಾರ್ಯಕ್ರಮಗಳು ಒಂದಿಲ್ಲೊಂದು ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದು, ಕ್ಷುಲಕ ಕಾರಣಗಳಿಗೆ ವ್ಯಾಪಕ ಸದ್ದು ಮಾಡುತ್ತಿವೆ. ಇದೀಗ ಬಿರಿಯಾನಿ ಅಲ್ಲಿ ಲೆಗ್​ಪೀಸ್​ ಸಿಗಲಿಲ್ಲ ಎಂಬ ಕಕಾರಣಕ್ಕೆ ಮದುವೆ ಮನೆ ರಣರಂಗವಾಗಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ವಿಡಿಯೋವನ್ನು ಅಭಿಜಿತ್​ ಮಜುಂದಾರ್​ ಎಂಬುವವರು ಪೋಸ್ಟ್​ ಮಾಡಿದ್ದು, ಜನ ಹೊಡೆದಾಡುವುದನ್ನು ನೋಡಬಹುದಾಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಗಂಡಿನ ಕಡೆಯವರಿಗೆ ನೀಡಲಾಗಿರುವ ಬಿರಿಯಾನಿಯಲ್ಲಿ ಲೆಗ್​ ಪೀಸ್​ ಇಲ್ಲ ಎಂದು ವಧುವಿನ ಕಡೆಯವರು ತಗಾದೆ ತೆಗೆಯುತ್ತಾರೆ. ಇದಕ್ಕೆ ಆಕ್ಷೇಪಿಸುವ ವರನ ಕಡೆಯವರು ಅಡಜಸ್ಟ್​ ಮಾಡಿಕೊಳ್ಳುವಂತೆ ಮನವಿ ಮಾಡುತ್ತಾರೆ. ವರನ ಕಡೆಯವರು ಇದಕ್ಕೆ ಒಪ್ಪದಿದ್ದಾಗ ವಾಗ್ವಾದ ಶುರುವಾಗಿದ್ದು, ಪರಸ್ಪರ ಹೊಡೆದಾಡಿಕೊಳ್ಳಲು ಶುರು ಮಾಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಮೂಲಕ ರಾಜಿ ಸಂಧಾನ ಮಾಡಿಸಿ ಮದುವೆ ಕಾರ್ಯಕ್ರಮವನ್ನು ಮುಂದುವರೆಸಲು ಅನುವು ಮಾಡಿಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಮನೆಯಲ್ಲಿ ಕುರ್ಚಿಗಳನ್ನು ಪರಸ್ಪರ ಎಸೆಯುತ್ತಿರುವ ದೃಶ್ಯವನ್ನು ಕಾಣಬಹುದು. ವರ ಹಾಗೂ ವಧುವಿನ ಕಡೆಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ಇಂತಹ ಕ್ಷುಲ್ಲಕ ಕಾರಣಕ್ಕೂ ಜಗಳವಾಡುವ ಅವಶ್ಯಕತೆ ಇದೆಯೇ ಎಂದು ನೆಟ್ಟಿಗರು ಕಮೆಂಟ್​ಗಳ ಮೂಲಕ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net