Zodiac Signs : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು ಧರ್ಮದಲ್ಲಿ ಈ ಜನ್ಮ ದಿನಾಂಕ ಮತ್ತು ಹುಟ್ಟಿದ ಗಳಿಗೆಯು ವ್ಯಕ್ತಿಯ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ ಮತ್ತು ವ್ಯಕ್ತಿತ್ವ ಹಾಗೂ ಹಣಕಾಸಿನ ಸ್ಥಿತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ 12 ರಾಶಿಚಕ್ರ ಚಿಹ್ನೆಗಳನ್ನು ವಿಭಿನ್ನ ಗ್ರಹಗಳು ಆಳುವುದರಿಂದ, ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವು ವಿಭಿನ್ನವಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಚಕ್ರವು ತನ್ನದೇ ಆದ ಸ್ವಭಾವವನ್ನು ಹೊಂದಿರುತ್ತವೆ. ಆದ್ದರಿಂದ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ದುರ್ಬಲರಾಗಿರುತ್ತಾರೆ ಮತ್ತು ಯಾವುದೇ ಕೆಲಸವನ್ನು ಮಾಡುವ ಮೊದಲು ಹಲವು ಬಾರಿ ಯೋಚಿಸುತ್ತಾರೆ. ಆದರೆ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದವರು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ ಮತ್ತು ಯಾವುದೇ ಕೆಲಸಗಳನ್ನು ಭಯವಿಲ್ಲದೆ ಮಾಡುತ್ತಾರೆ.
ಹೀಗಾಗಿ, ಯಾವ ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಜನಿಸಿದವರು ಯಾವುದೇ ಭಯವಿಲ್ಲದೆ ಏನು ಬೇಕಾದರೂ ಮಾಡುವಂತಹ ಧೈರ್ಯವನ್ನು ಹೊಂದಿರುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.
ಮೇಷ ರಾಶಿ
ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ಧೈರ್ಯಶಾಲಿಗಳಾಗಿರುತ್ತಾರೆ. ಅವರು ಯಾವುದೇ ಕೆಲಸವನ್ನು ಧೈರ್ಯದಿಂದ ಮಾಡುತ್ತಾರೆ ಮತ್ತು ಯಾವುದಕ್ಕೂ ಹೆದರುವುದಿಲ್ಲ. ಅಲ್ಲದೆ, ಅವರ ಧೈರ್ಯವು ಅವರ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಅವರು ತಪ್ಪುಗಳನ್ನು ಎಂದಿಗೂ ಸಹಿಸುವುದಿಲ್ಲ. ಯಾರಾದರೂ ತಮ್ಮ ಸ್ವಾಭಿಮಾನಕ್ಕೆ ನೋವುಂಟು ಮಾಡಲು ಪ್ರಯತ್ನಿಸಿದರೆ, ಅವರು ಅದನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದ ಜನರು ಭಯದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅವರು ಸಾಧ್ಯವಾದಷ್ಟು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಪ್ರಗತಿ ಹೊಂದುವ ಬಗ್ಗೆ ಯೋಚಿಸುತ್ತಾರೆ. ಅವರು ಪ್ರಾಮಾಣಿಕವಾಗಿ ವರ್ತಿಸುವುದರಿಂದ ಯಾವುದೇ ಭಯವಿರುವುದಿಲ್ಲ. ಅವರು ಆಗಾಗ್ಗೆ ಕೋಪಗೊಳ್ಳುತ್ತಾರೆ ಆದರೆ, ಕೆಲವೊಮ್ಮೆ ಶಾಂತವಾಗಿರುತ್ತಾರೆ. ಅವರು ಪ್ರಾಮಾಣಿಕರು, ಶಿಸ್ತುಬದ್ಧರು ಮತ್ತು ಇತರರ ವಿಶ್ವಾಸವನ್ನು ಗಳಿಸುತ್ತಾರೆ. ಈ ರಾಶಿಯವರು ಅನೇಕ ಒಳ್ಳೆಯ ಅಭ್ಯಾಸಗಳನ್ನು ಹೊಂದಿರುತ್ತಾರೆ. ಇತರರಿಗೆ ಒಳ್ಳೆಯದು ಮಾಡುವಲ್ಲಿ ಅವರಂತೆ ಯಾರೂ ಇರುವುದಿಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಜನಿಸಿದ ಜನರು ಸಿಂಹಗಳಂತೆ ಧೈರ್ಯಶಾಲಿಗಳು. ಅವರನ್ನು ಹೆಚ್ಚಾಗಿ ಪೊಲೀಸ್, ವೈದ್ಯಕೀಯ ಮತ್ತು ಮಿಲಿಟರಿಯಂತಹ ಕ್ಷೇತ್ರಗಳಲ್ಲಿ ಕಾಣಬಹುದು. ಗುರಿಗಳತ್ತ ಅವರ ಪ್ರಯಾಣ ಸ್ಪಷ್ಟವಾಗಿರುತ್ತದೆ. ಎಂದಿಗೂ ತಲೆ ಬಾಗಿ ಕೆಲಸ ಮಾಡಲು ಸಿದ್ಧರಿರುವುದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ, ತುಂಬಾ ಕೋಪಗೊಳ್ಳುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.
ಈ 3 ರಾಶಿಯ ಮಹಿಳೆಯರು ಯಾರಿಗೂ ಹೆದರುವುದಿಲ್ಲ, ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸ್ತಾರಂತೆ! Zodiac Signs
ಈ 3 ರಾಶಿಯವರು ಎಲ್ಲರನ್ನೂ ಸಮಾನವಾಗಿ ಗೌರವಿಸುತ್ತಾರಂತೆ! ಯಾರಿಗೂ ಕೇಡು ಬಯಸಲ್ಲ… Zodiac Signs