ಬೈಕ್ ಡಿಕ್ಕಿಯಾಗಿ ಪಾದಚಾರಿ ಗಾಯ

accident-15
Published on

ಗಂಗೊಳ್ಳಿ: ಗಂಗೊಳ್ಳಿ ಗ್ರಾಪಂ ಸಮೀಪ ಶನಿವಾರ ಸಂಜೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಗಂಗೊಳ್ಳಿ ಗ್ರಾಮದ ನಾರಾಯಣ ಎಂಬುವರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ.

ಅಬ್ದುಲ್ ಮುನಾಫ್ ಗಂಗೊಳ್ಳಿ ಮತ್ತು ನಾರಾಯಣ ಅವರು ಕೆಲಸ ಮುಗಿಸಿಕೊಂಡು ಗಂಗೊಳ್ಳಿ ಪಂಚಾಯಿತಿ ಸಮೀಪದ ಶ್ರೀಕಾಂತ್ ಎಂಬುವರ ಅಂಗಡಿ ಎದುರು ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತ್ರಾಸಿ ಕಡೆಯಿಂದ ಗಂಗೊಳ್ಳಿ ಬಂದರು ಕಡೆಗೆ ಹೋಗುತ್ತಿದ್ದ ಬೈಕ್ ನಾರಾಯಣ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾರಾಯಣ ಅವರು ಗಂಭೀರ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net