ಫೆ.14 ರಂದು ಮಂಗಳೂರಿನಲ್ಲಿ ‘ಪುಸ್ತಕ ಪ್ರೇಮಿಗಳ ದಿನಾಚರಣೆ’

bok releas
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಪ್ರೇಮಿಗಳ ದಿನ ಮಂಗಳೂರಿನ ರಂಗ ಸಂಗಾತಿ ಪ್ರತಿಷ್ಠಾನ ಸಂಸ್ಥೆಯು 10 ಸಾಹಿತ್ಯ ತಿಗಳನ್ನು ಬಿಡುಗಡೆಗೊಳಿಸುವ ಮೂಲಕ ವಿಶಿಷ್ಟ ರೀತಿಯಲಿ ‘ಪುಸ್ತಕ ಪ್ರೇಮಿಗಳ ದಿನಾಚರಣೆ’ ಆಚರಿಸಲು ಸಜ್ಜಾಗಿದೆ !

ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಫೆಬ್ರವರಿ 14 ರಂದು ಬೆಳಗ್ಗೆ 10 ಕ್ಕೆ ನಡೆಯುವ ಕಾರ್ಯಕ್ರಮವನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಉದ್ಘಾಟಿಸಿವರು. ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸುವರು. ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಹರಿನಾರಾಯಣದಾಸ ಅಸ್ರಣ್ಣರು ಆಶೀರ್ವಚನ ನೀಡುವರು. ಶ್ರೀನಿಜಲಿಂಗೇಶ್ವರ ಸ್ವಾಮಿ, ಪ್ರೊ.ಬಿ.ಎ.ವಿವೇಕ ರೈ, ಡಾ.ಗಣೇಶ್ ಅಮೀನ್ ಸಂಕಮಾರ್, ಅಗರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಯಾಗಿರುವರು ಎಂದು ಮುಖ್ಯ ಅತಿಥಿಯಾಗಿರುವರು.

ಡಾ.ವಿಶ್ವನಾಥ ಬದಿಕಾನ ಅವರ ’ಕನ್ನಡ ಜಾಣಪದ ಅಧ್ಯಯನದ ಮೊದಲ ಘಟ್ಟ’ ಸಂಶೋಧನಾ ಗ್ರಂಥ , ಬೆಳಗ್ಗೆ 11ಕ್ಕೆ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಸೃಷ್ಟಿ ಸಿರಿಯಲ್ಲಿ ಪುಷ್ಪವೃಷ್ಟಿ’ ಕನ್ನಡ ಕವನ ಸಂಕಲನ, 11.30 ಕ್ಕೆ ಅಕ್ಷತಾ ರಾಜ್ ಪೆರ್ಲ ಅವರ ‘ನೆಲ ಉರುಳು’ ಕನ್ನಡ ನಾಟಕ, 12 ಕ್ಕೆ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ‘ನೆಪವು ಸಿಕ್ಕಿದೆ ಬದುಕಿಗೆ’ ಕನ್ನಡ ಕವನಸಂಕಲನ, ಮಧ್ಯಾಹ್ನ 2.30 ಕ್ಕೆ ಕರುಣಾಕರ ಬಳ್ಕೂರು ಅವರ ‘ಬೆಳಕು’ ಕವನ ಸಂಕಲನ, 3 ಗಂಟೆಗೆ ಡಾ.ಎಸ್.ಎಂ.ಶಿವಪ್ರಕಾಶ್ ಅವರ ’ಟೆಕಾನಜಿ ವಸ್ಸ್ ಇಕೋಲಜಿ’ ಫಿಶರೀಸ್ ಗೀತೆಗಳು, 3.30 ಕ್ಕೆ ಶ್ರೀರಘು ಇಡ್ಕಿದು ಅವರ ‘ಪೊನ್ನಂದಣ’ ಕೃತಿ ವಿಮರ್ಶೆ, 4 ಕ್ಕೆ ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಕಾತೀಶ್ವರ ವಚನಗಳು’ ಆಧುನಿಕ ವಚನಗಳು, 4.30 ಕ್ಕೆ ಪ್ರೊ.ಅಕ್ಷಯ ಆರ್. ಶೆಟ್ಟಿ ಅವರ ‘ಅವಳೆಂದರೆ ಬರಿ ಹೆಣ್ಣೆ’ ಕನ್ನಡ ಕಥೆಗಳು, 5 ಕ್ಕೆ ಪ್ರಕಾಶ್ ವಿ.ಎನ್. ಅವರ ‘ನಮ್ಮವನು ಶ್ರೀರಾಮಚಂದ್ರ’ ಕನ್ನಡ ನಾಟಕ ‘ಪುಸ್ತಕ ಪ್ರೇಮಿಗಳ ದಿನಾಚರಣೆ’ ದಿನ ಬಿಡುಗಡೆಗೊಳ್ಳಲಿರುವ ಕೃತಿಗಳು.

ಈ ಸಂದರ್ಭ ಪುಸ್ತಕ ಪ್ರೇಮದ ಚಿತ್ರಕಲಾ ಸ್ಪರ್ಧೆ ಹಾಗೂ ಪುಸ್ತಕ ಮೇಳ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net