ನೆಮ್ಮದಿ ಜೀವನಕ್ಕೆ ಕಾನೂನು ತಿಳಿವಳಿಕೆ ಅಗತ್ಯ - ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮೀದೇವಿ ಹೇಳಿಕೆ

091120 Koppal National Legal Service Day
ಕೊಪ್ಪಳದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯಲ್ಲಿ ಜಿಲ್ಲಾ ನ್ಯಾ.ಎಲ್.ವಿಜಯಲಕ್ಷ್ಮೀದೇವಿ ಮಾತನಾಡಿದರು.
Published on

ಕೊಪ್ಪಳ: ಸಮಾಜದಲ್ಲಿ ನೆಮ್ಮದಿಯಾಗಿ ಜೀವನ ನಡೆಸಲು ನಮಗೆ ಕಾನೂನು ತಿಳಿವಳಿಕೆ ಅವಶ್ಯ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಎಲ್. ವಿಜಯಲಕ್ಷ್ಮೀದೇವಿ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಣಕಾಸು ತೊಂದರೆಯಿಂದ ಬಡವರು, ನಿರ್ಗತಿಕರು ಕಾನೂನು ಸೌಲಭ್ಯದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಾನೂನು ಸೇವೆ ಕಾಯ್ದೆ ಜಾರಿಯಾಗಿದೆ. ಉಚಿತ ಕಾನೂನು ಸೇವೆ ನೀಡುವ ಮೂಲಕ ಕಾನೂನು ಸೇವೆಗಳ ಪ್ರಾಧಿಕಾರ ಸಹಕರಿಸುತ್ತಿದೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ವಕೀಲರ ಸಂಘ, ವಕೀಲರ ಸಹಕಾರ ಅಪಾರ. ಜನರಲ್ಲಿ ಕಾನೂನಿನ ಬಗ್ಗೆ ಅರಿವು ಉಂಟು ಮಾಡುವುದು, ಉಚಿತ ಕಾನೂನು ನೆರವು ಮತ್ತು ಸಲಹೆ ಕೊಡುವುದು, ಜನತಾ ನ್ಯಾಯಾಲಯಗಳ (ಲೋಕ ಅದಾಲತ್) ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಜನರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡುವುದು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶ ಎಂದರು.

ವಕೀಲ ಎಸ್.ಬಿ.ಪಾಟೀಲ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಮುರಡಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಎಸ್.ಎಂ.ಜಾಲವಾದಿ, ಕುಮಾರ ಎಸ್., ಮನುಶರ್ಮಾ ಎಸ್.ಪಿ., ಜಿಲ್ಲಾ ಸರ್ಕಾರಿ ವಕೀಲ ರಾಜಶೇಖರ ವಿ.ಗಣವಾರಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ವಿ ಸಜ್ಜನ್, ಕೋರ್ಟ್ ಮ್ಯಾನೇಜರ್ ಶಿವಕುಮಾರ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net