

PBKS vs KKR: ಇಂದು (ಏ.15) ಪಂಜಾಬ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿಂಗ್ಸ್, ಕೆಕೆಆರ್ಗೆ ಬೌಲಿಂಗ್ ಮಾಡುವಂತೆ ತಿಳಿಸಿತು. 15.3 ಓವರ್ಗೆ ಆಲ್ಔಟ್ ಆದ ಪಂಜಾಬ್, ಕೇವಲ 111 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿಯನ್ನು ಬೆನ್ನತ್ತಿರುವ ಕೋಲ್ಕತ ಕೂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ತೀರ ಪರದಾಡುವ ಸ್ಥಿತಿ ತಲುಪಿದೆ.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ಗೆ ಆರಂಭದಲ್ಲೇ ಆಘಾತ ಎದುರಾಯಿತು. ಆ ನಂತರ ಕ್ರೀಸ್ಗೆ ಬಂದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಸ್ಫೋಟಕ ಇನ್ನಿಂಗ್ಸ್ ನೀಡುವಂತೆ ಕಂಡರು. ಆದರೆ, ಬೌಂಡರಿ ಹೊಡೆಯುವ ಭರದಲ್ಲಿ ರಮಣದೀಪ್ ಸಿಂಗ್ಗೆ ಕ್ಯಾಚ್ ನೀಡಿದರು. ಈ ಅದ್ಭುತ ಕ್ಯಾಚ್‌ನೊಂದಿಗೆ ಮಿಂಚಿದ ರಮಣದೀಪ್, ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ಗೆ ಅಚ್ಚರಿ ಮೂಡಿಸಿದರು. ಈ ರೋಮಾಂಚಕ ಕ್ಯಾಚ್ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದೆ.
ಅಯ್ಯರ್ ಆಡಿದ ಶಾಟ್ ನೇರವಾಗಿ ಡೀಪ್ ಪಾಯಿಂಟ್‌ನಲ್ಲಿದ್ದ ರಮಣದೀಪ್ ಕೈಗೆ ಹೋಯಿತು. ತನ್ನ ಕಡೆ ಬಾಲ್ ಬರುತ್ತಿದ್ದಂತೆ ಬಹಳ ವೇಗವಾಗಿ ಓಡಿಬಂದ ರಮಣದೀಪ್, ಜಿಗಿದು ಅದ್ಭುತ ಕ್ಯಾಚ್ ಹಿಡಿದರು. ಇದು ಆಟದ ದಿಕ್ಕನ್ನೇ ಬದಲಿಸಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ಗೆ ಬೆವರಿಳಿಸಿದ ಕೆಕೆಆರ್ ಬೌಲರ್ಗಳು, 15.3 ಓವರ್‌ಗಳಲ್ಲಿ 111 ರನ್ ಗಳಿಸಿದ್ದ ಪಂಜಾಬ್ ಪಡೆಯನ್ನು ಆಲೌಟ್ ಮಾಡಿತು.
ಪ್ರಭುಸಿಮ್ರನ್ ಸಿಂಗ್ (30)
ಪ್ರಿಯಾಂಶ್ ಆರ್ಯ (22)
ಶಶಾಂಕ್ ಸಿಂಗ್ (18)
ಶ್ರೇಯಸ್ ಅಯ್ಯರ್ (0)
ಗ್ಲೆನ್ ಮ್ಯಾಕ್ಸ್‌ವೆಲ್ (7)