ನಿಮ್ಮನ್ನು ತಾಯಿಯಾಗಿ ಪಡೆಯುವುದಕ್ಕೆ ಪುಣ್ಯ ಮಾಡಿದ್ದೀನಿ, ಲವ್ ಯೂ ಅಮ್ಮ; ಜೈಲಲ್ಲಿರೋ ಪವಿತ್ರಾ ಗೌಡಳ ನೆನೆದ ಪುತ್ರಿ

pavitra gowda
Published on

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್​ ಹಾಗೂ ನಟಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಪವಿತ್ರಾ ಗೌಡ ಅವರಿಂದ ದೂರ ಇರುವ ಮಗಳು ಅಮ್ಮನ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರದುಕೊಂಡಿದ್ದಾರೆ.

ನಟ ದರ್ಶನ್ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್ ಚಾರ್ಜ್ ಶೀಟ್ ಸಲ್ಲಿಕೆ ಕುತೂಹಲದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡ ಅವರ ಮಗಳು ಖುಷಿ ಇನ್​ಸ್ಟಾಗ್ರಾಮ್​​ ಪೋಸ್ಟ್​ವೊಂದು ವೈರಲ್ ಆಗುತ್ತಿದೆ.

ಖುಷಿ ಗೌಡ ಪೋಸ್ಟ್​​ನಲ್ಲಿ ಏನಿದೆ?:  ಯಾವುದೇ ಪರಿಸ್ಥಿತಿ ಇರಲಿ ನನ್ನ ಸಹಾಯಕ್ಕೆ ಬಂದೇ ಬರುತ್ತಾರೆ. ಈ ದಿನಗಳಲ್ಲಿ ನನಗೆ ಏನೇ ಬೇಕಿದ್ದರೂ ಅಮ್ಮ ನನ್ನ ಜೊತೆಗೆ ಇದ್ದಾಳೆ ಎಂದು ನನಗೆ ಗೊತ್ತು. ಹೀಗಾಗಿನೇ ಆಕೆಯನ್ನು ಬೆಸ್ಟ್ ಅಮ್ಮ ಎಂದು ಕರೆಯುವುದು. ನಿಮ್ಮನ್ನು ತಾಯಿಯಾಗಿ ಪಡೆಯುವುದಕ್ಕೆ ಪುಣ್ಯ ಮಾಡಿದ್ದೀನಿ. ಲವ್ ಯೂ ಅಮ್ಮ ಎಂದು ಪುತ್ರಿ ಸೋಶಿಯಲ್ ಮೀಡಿಯಾದಲ್ಲಿ ಎಮೋಷನಲ್ ಆಗಿ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಕುರಿತಾದ ಪೋಸ್ಟ್​​ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ತನ್ನ ತಾಯಿ ಸ್ಥಾಪನೆ ಮಾಡಿದ ರೆಡ್‌ ಕಾರ್ಪೆಟ್‌ 777 ಡಿಸೈನರ್ ಸ್ಟುಡಿಯೋವನ್ನು ಸದ್ಯ ಪುತ್ರಿ ಖುಷಿ ನಡೆಸಿಕೊಂಡು ಹೋಗುತ್ತಿದ್ದಾಳೆ. ಸದ್ಯ ಮುಂಬರುವ ಗೌರಿ ಗಣೇಶ್ ಹಬ್ಬಕ್ಕೆ ತಮ್ಮ ಶಾಪ್​ಗೆ ಬಂದ ಹೊಸ ಕಲೆಕ್ಷನ್​ ಆಫರ್ ಬಗ್ಗೆ ರೆಡ್‌ ಕಾರ್ಪೆಟ್‌ 777 ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net