ಕೋರ್ಟ್​ ವಿಚಾರಣೆಗೆ ಪವಿತ್ರಾ ಗೌಡ ಗೈರು; ವಿಚಾರಣೆ ಮುಂದೂಡಿಕೆ | Darshan

Actor Darshan
Published on

ಇಂದು ಕೋರ್ಟ್​ಗೆ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಕೆಲ ಆರೋಪಿಗಳು ವಿಚಾರಣೆಗೆ ಹಾಜರಾಗದೇ ಗೈರಾಗಿದ್ದರು. ಆರೋಪಿಗಳಾದ ಪವಿತ್ರಾ ಗೌಡ, ವಿನಯ್, ಧನರಾಜ್, ಕಾರ್ತಿಕ್ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು 12/08/2025 ಕ್ಕೆ 64ನೇ ಎಸಿಎಂಎಂ ನ್ಯಾಯಾಲಯ ಮುಂದೂಡಿದೆ. ಆಗಸ್ಟ್ 12 ರಂದು ಮತ್ತೆ ಹಾಜರಾಗಲು ಜಡ್ಜ್ ಆದೇಶ ನೀಡಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್ ನಟ ದರ್ಶನ್ ಇಂದು (10) ಸಿವಿಲ್ ಕೋರ್ಟ್​ಗೆ ಆಗಮಿಸಿದ್ದರು.

ಜೈಲಿನಲ್ಲಿದ್ದಾಗಲೇ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್ ಅವರು ಬಿಡುಗಡೆ ಬಳಿಕ ಚಿಕಿತ್ಸೆ ಪಡೆದರು. ಬಳಿಕ ಅವರು ಪೂರ್ತಿ ಗುಣಮುಖರಾದ ಬಗ್ಗೆ ಮಾಹಿತಿ ಇಲ್ಲ. ಆದರೆ ಅವರು ಇಂದು ವಿಚಾರಣೆಗೆ ಕೋರ್ಟ್‌ಗೆ ತೆರಳು ಮನೆಯಿಂದ ಹೊರ ಬರುವಾಗ ಕುಂಟುತ್ತಲೇ ಬಂದರು. ಮನೆ ಬಾಗಿಲಿಗೆ ಬಂದ ಅವರು ತುಳಸಿ ಗಿಡಕ್ಕೆ ನೀರು ಹಾಕಿ, ಮೇಲೆ ದೇವರಿಗೆ ನಮಸ್ಕರಿಸಿದರು. ಇನ್ನೂ ದರ್ಶನ್ ಕುಂಟುತ್ತಲೇ ಕಾರಿನತ್ತ ನಡೆದ ದೃಶ್ಯಗಳು ವೈರಲ್ ಆಗಿವೆ.

ನಾಳೆ ವಿದೇಶಕ್ಕೆ ತೆರಳಲಿರೋ ದರ್ಶನ್

(ಏಜೆನ್ಸೀಸ್)

ಹೈಕೋರ್ಟ್ ದರ್ಶನ್‌ಗೆ ಜಾಮೀನು ನೀಡುವಾಗ ಹಲವು ಷರತ್ತು ವಿಧಿಸಿತ್ತು. ಅನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ ಎಂದು ಹೇಳಿತ್ತು. ಅದರಂತೆ ನಟ ದರ್ಶನ್ ಅವರು, ಜುಲೈ 11 ರಿಂದ 30 ರವರೆಗೆ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿದ್ದರು. ಅವರ ಮನವಿ ಮೇರೆಗೆ 57 ಸಿಸಿಎಚ್ ಕೋರ್ಟ್ ಜುಲೈ 11ರಿಂದ 25ರವರೆಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ. ಹಾಗಾಗಿ ನಟ ದರ್ಶನ್ ನಾಳೆ ಶುಕ್ರವಾರ (ಜುಲೈ) ಯುರೋಪ್ ಹಾಗೂ ದುಬೈಗೆ ತೆರಳಲಿದ್ದು, ಅಲ್ಲಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net