ಜ್ಞಾನ ಸಂಪಾದನೆಯಿಂದ ಬೆಳಕಿನ ಹಾದಿ

Ull_Light
Published on

ಉಳ್ಳಾಲ: ಪ್ರತಿಯೊಬ್ಬ ಮನುಷ್ಯನೂ ತನ್ನ ಪ್ರತಿಭೆ ಮೂಲಕ ಸವಾಜದಲ್ಲಿ ಗುರುತಿಸಿಕೊಂಡು, ಅಪಾರ ಜ್ಞಾನ ಸಂಪಾದಿಸಿದಾಗ ಕತ್ತಲೆಯ ಲೋಕದಿಂದ ಬೆಳಕಿನ ಹಾದಿ ಹಿಡಿಯುವುದೇ ನಿಜವಾದ ದೀಪಾವಳಿ ಎಂದು ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಉಪನ್ಯಾಸಕಿ ಮುಬೀನಾ ಪರ್ವಿನ್ ತಾಜ್ ಹೇಳಿದರು.

ದೀಪಾವಳಿ ಪ್ರಯುಕ್ತ ಮಂಜೇಶ್ವರ ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಜಾದೂ ಪ್ರದರ್ಶನ ಕಾರ್ಯಕ್ರಮದಲ್ಲಿ ವಾತನಾಡಿದರು.

ಕಲಾ ಸೃಷ್ಟಿ ಸಂಸ್ಥೆಯ ಸದಸ್ಯರು ಮೇಣದ ಬತ್ತಿ ಬೆಳಗಿ ನಂತರ ಹೂಗುಚ್ಛವಾಗಿ ಪರಿವರ್ತಿಸುವ ಜಾದೂ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಫಾ.ಸಿರಿಲ್ ಡಿಸೋಜ ವಾತನಾಡಿ, 7,500 ವರ್ಷಗಳ ಹಿಂದೆಯೇ ಸುಖಿ ಹಬ್ಬ ಎಂದು ದೀಪಾವಳಿ ಆಚರಿಸುತ್ತಿದ್ದರು. ಭಗವಾನ್ ಶ್ರೀರಾಮ ವನವಾಸದಿಂದ ಅಯೋಧ್ಯೆಗೆ ಹಿಂದಿರುಗಿ ಬರುವಾಗ ಅಯೋಧ್ಯೆಯ ಜನರು ಹಣತೆ ಬೆಳಗಿ ಸಂಭ್ರಮ ಪಟ್ಟ ಉಲ್ಲೇಖವಿದೆ ಎಂದರು.

ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ, ದಿನೇಶ್ ಕೊಡಂಗೆ ಮೊದಲಾದವರಿದ್ದರು. ಸ್ನೇಹಾಲಯ ಸಂಸ್ಥೆಯ ಸರಿತಾ ಕ್ರಾಸ್ತ ಸ್ವಾಗತಿಸಿದರು. ಲವೀಟಾ ಡಿಸೋಜ ನಿರೂಪಿಸಿದರು. ಬಳಿಕ ಕಲಾ ಸಷ್ಟಿ ತಂಡದ ನಿರ್ದೇಶಕಿ ಶವಾ ಪರ್ವಿನ್ ತಾಜ್ ಮತ್ತು ತಂಡದಿಂದ ಜಾದೂ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net