ಪಾತಾಳ ಕಲಾಮಂಗಳ ಪ್ರಶಸ್ತಿ ಪ್ರದಾನ

5
Published on

ಉಪ್ಪಿನಂಗಡಿ: ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ ಪಾತಾಳ ವತಿಯಿಂದ ನೀಡಲಾಗುವ ಪಾತಾಳ ಕಲಾಮಂಗಳ ಪ್ರಶಸ್ತಿ ಪ್ರದಾನ ಪಾತಾಳದಲ್ಲಿ ನಡೆಯಿತು.

ಯಕ್ಷಗಾನ ಕ್ಷೇತ್ರದ ಗುಂಡಿಮಜಲು ಗೋಪಾಲಕೃಷ್ಣ ಭಟ್, ಓಟೆಪಡ್ಪು ವಿಷ್ಣು ಶರ್ಮ ಅವರಿಗೆ ಪಾತಾಳ ಕಲಾಮಂಗಳ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಾತಾಳ ಮನೆತನದೊಂದಿಗೆ ಸುದೀರ್ಘ ನಂಟು ಹೊಂದಿರುವ ಶ್ರಮಿಕರಾದ ಅರ್ತಿಲ ಕೃಷ್ಣಪ್ಪ ಗೌಡ, ಪದಾಳ ವೆಂಕಪ್ಪ ಮಡಿವಾಳ, ಬಾಣಂತಿ ಆರೈಕೆಯ ವಿಮಲಾ ಮಡಿವಾಳ್ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ, ಮೂಡುಬಿದಿರೆಯ ಶ್ರೀಪತಿ ಭಟ್, ಮಂಗಳೂರಿನ ಜನಾರ್ದನ ಹಂದೆ, ಮಾಜಿ ಶಾಸಕ ಸಂಜೀವ ಮಠಂದೂರು ಮುಖ್ಯ ಅತಿಥಿಗಳಾಗಿದ್ದರು. ಪ್ರಮುಖರಾದ ಪಾತಾಳ ವೆಂಕಟರಮಣ ಭಟ್, ಅಂಬಾ ಪ್ರಸಾದ ಪಾತಾಳ, ಶ್ರೀರಾಮ ಪಾತಾಳ, ಗಣರಾಜ ಕುಂಬ್ಳೆ, ಡಾ.ಗೋವಿಂದಪ್ರಸಾದ್ ಕಜೆ, ರಮೇಶ್ ಭಟ್ ಕಜೆ, ಹರಿಕಿರಣ್ ಕೊಯಿಲ ಮತ್ತಿತರರಿದ್ದರು. ಉಜಿರೆ ಅಶೋಕ್ ಭಟ್ ಅಭಿನಂದನಾ ನುಡಿಗಳನ್ನಾಡಿದರು. ಮಹಾಲಿಂಗ ಭಟ್ ಬಿಲ್ಲಂಪದವು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net