ಐಪಿಎಲ್​ನಿಂದ ತವರಿಗೆ ಮರಳುವ ಮುನ್ನ ಗುಡ್​ನ್ಯೂಸ್​ ಪಡೆದ ಪ್ಯಾಟ್​ ಕಮ್ಮಿನ್ಸ್​!

cummins web
Published on

ಕೋಲ್ಕತ: ಐಪಿಎಲ್​ ವೇಳೆ ಕರೊನಾದಿಂದ ಸಂಕಷ್ಟದಲ್ಲಿರುವವರಿಗೆ ಆಕ್ಸಿಜನ್​ ಪೂರೈಕೆಗಾಗಿ ಆರ್ಥಿಕ ನೆರವು ನೀಡುವ ಮೂಲಕ ಭಾರತೀಯರ ಮನಗೆದ್ದಿದ್ದ ಆಸ್ಟ್ರೆಲಿಯಾದ ವೇಗಿ ಪ್ಯಾಟ್​ ಕಮ್ಮಿನ್ಸ್​, ಟೂರ್ನಿ ಸ್ಥಗಿತಗೊಂಡ ಬಳಿಕ ತವರಿನತ್ತ ಹೊರಟಿದ್ದಾರೆ. ಸದ್ಯ ಮಾಲ್ಡೀವ್ಸ್​ನಲ್ಲಿ ಕ್ವಾರಂಟೈನ್​ ಆಗಿರುವ ಕೋಲ್ಕತ ನೈಟ್​ರೈಡರ್ಸ್​ ಆಟಗಾರ ಕಮ್ಮಿನ್ಸ್​ಗೆ ಅಮ್ಮಂದಿರ ದಿನದಂದೇ ಶುಭ ಸುದ್ದಿಯೊಂದು ಲಭಿಸಿದೆ. ಅವರ ಗೆಳತಿ ಹಾಗೂ ಭಾವಿ ಪತ್ನಿ ಬೆಕಿ ಬೋಲ್ಟನ್​ ಅಮ್ಮನಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕಮ್ಮಿನ್ಸ್​ ಈ ವರ್ಷ ಅಪ್ಪನಾಗಲಿದ್ದಾರೆ ಎಂದು ಕೆಕೆಆರ್​ ತಂಡ ಟ್ವಿಟರ್​ನಲ್ಲಿ ಭಾನುವಾರ ಪ್ರಕಟಿಸಿದೆ. ಜತೆಗೆ ಕಮ್ಮಿನ್ಸ್​-ಬೋಲ್ಟನ್​ ಜೋಡಿಗೆ ಶುಭಾಶಯಗಳನ್ನೂ ತಿಳಿಸಿದೆ.

ನನ್ನ ಖುಷಿಯನ್ನು ಇನ್ನೆಂದೂ ಮುಚ್ಚಿಟ್ಟುಕೊಳ್ಳಲಾರೆ. ಬೇಬಿ ಬೋಸ್ಟನ್​ ಕಮ್ಮಿನ್ಸ್​ ಈ ವರ್ಷ ನಮ್ಮನ್ನು ಕೂಡಿಕೊಳ್ಳಲಿದೆ ಎಂದು ಬೆಕಿ ಬೋಸ್ಟನ್​ ಕೂಡ ಪೋಸ್ಟ್​ ಮಾಡಿದ್ದಾರೆ. ದೀರ್ಘಕಾಲದ ಗೆಳತಿ ಬೋಸ್ಟನ್​ ಜತೆಗೆ ಕಮ್ಮಿನ್ಸ್​ ಕಳೆದ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net