ಭೀಕರ ಅಪಘಾತವಾಗಿದ್ದ ಬಾಲಾಸೋರ್​ನ ಪ್ಯಾಸೆಂಜರ್​ ರೈಲು ಮಾರ್ಗ ಪುನರಾರಂಭ

passenger train
Published on

ಒಡಿಶಾ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಅಪರೂಪದ ಆಘಾತಕಾರಿ ರೈಲು ದುರಂತದಿಂದಾಗಿ ಸುಮಾರು 288ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು 900ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದರು. ಇದೀಗ ಎಕ್ಸ್​ಪ್ರೆಸ್​ವೇ ದುರಸ್ತಿಗೊಂಡಿದ್ದು ಪ್ಯಾಸೆಂಜರ್​ ರೈಲುಗಳು ಸಂಚರಿಸಲು ಶುರು ಮಾಡಿವೆ.

ನಿನ್ನೆಯಷ್ಟೇ ಕೇಂದ್ರ ರೈಲ್ವೇ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್​ ಮಾಡಿ ಗೂಡ್ಸ್ ರೈಲು ಸಂಚಾರ ಆರಂಭವಾಗಿದ್ದ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಂಡಿದ್ದರು. ಅದರೊಂದಿಗೆ "ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಅವಿರತ ಶ್ರಮದಿಂದ ಹಾನಿಗೊಳಗಾಗಿದ್ದ ಮಾರ್ಗವನ್ನು ಬೇಗ ದುರಸ್ತಿ ಮಾಡಲಾಗಿದೆ" ಎಂದು ಸಚಿವ ಅಶ್ವಿನಿ ವೈಷ್ಣವ್ ಟ್ವಿಟ್ ಮೂಲಕ ತಿಳಿಸಿದ್ದರು.

ಅದರಂತೆ ಬೆಂಗಳೂರು-ಹೌರಾ ಎಕ್ಸ್​ಪ್ರೆಸ್​ ರೈಲು ಅಪಘಾತಕ್ಕೆ ಈಡಾಗಿದ್ದ ಮಾರ್ಗದಲ್ಲಿ ಕಲ್ಲಿದ್ದಲು ತುಂಬಿದ್ದ ಗೂಡ್ಸ್​ ಗಾಡಿಯೊಂದು ರೂರ್ಕೆಲಾ ಸ್ಟೀಲ್​ ಪ್ಲಾಂಟ್​ ಕಡೆಗೆ ಸಂಚಾರ ಮಾಡಿತ್ತು. ಇದೀಗ ಮೂರು ರೈಲುಗಳ ಭೀಕರ ಅಪಘಾತ ನಡೆದ 51 ಗಂಟೆಗಳ ಒಳಗಾಗಿ ಪ್ಯಾಸೆಂಜರ್​ ರೈಲು ಅದೇ ಮಾರ್ಗದಲ್ಲಿ ಸಂಚಾರ ಮಾಡಿದೆ. ಈ ಬಗ್ಗೆ ಎಎನ್​ಐ ವಿಡಿಯೋ ಒಂದನ್ನು ಟ್ವೀಟ್​ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net