Paan ಉಗುಳಲು ಹೋಗಿ ಬಸ್ಸಿನಿಂದ ಬಿದ್ದು ವ್ಯಕ್ತಿ ಸಾವು

Death Case
Published on

ಲಖನೌ: ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆಗೆದು ಪಾನ್​ (Paan) ಉಗಿಯಲು ಹೋಗಿ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಸುಲ್ತಾನ್​ಪುರದಲ್ಲಿ ನಡೆದಿದೆ.

ಘಟನೆಯು ಎಕ್ಸ್‌ಪ್ರೆಸ್‌ವೇಯ 93-ಕಿಮೀ ಮೈಲಿಗಲ್ಲಿನಲ್ಲಿ ನಡೆದಿದ್ದು, ಅಜಂಗಢದಿಂದ ಲಖನೌಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಸುಲ್ತಾನ್​ಪುರದ ಬಾಲ್ದಿರೈ ಪೊಲೀಸ್ ಠಾಣೆ ವ್ಯಾಪ್ತಿಯ ಬಿಹಿ ಗ್ರಾಮದ ಬಳಿ ಈ ಘಟನೆ ನಡೆದಿದೆ. 

ಈ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೃತರನ್ನು ಲಖನೌನ ಚಿನ್ಹಾಟ್ ಪ್ರದೇಶದ ನಿವಾಸಿ ರಾಮ್ ಜಿವಾನ್ ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಎಸಿ ಬಸ್ಸಿನಲ್ಲಿ ಅವರ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದರು. ಪಾನ್​ ಉಗುಳಲು ಬಾಗಿಲನ್ನು ತೆಗೆಸಿದ್ಧಾರೆ. ಪಾನ್​ ಉಗಿಯುವ ವೇಳೆ ಸಮತೋಲನವನ್ನು ಕಳೆದುಕೊಂಡ ವ್ಯಕ್ತಿ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

UP Bus Split
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net