ಗರ್ಭಿಣಿಯರು ಆದರೆ ಗರ್ಭಿಣಿಯರಲ್ಲ; ನಿತ್ಯಾ ಮತ್ತು ಪಾರ್ವತಿಯ ಹೊಸ ಕಥೆ

Nitya - Parvathy
Published on

ಚೆನ್ನೈ: ಒಬ್ಬ ನಟಿ ತಾನು ಗರ್ಭಿಣಿ ಎಂದರೆ ಆಶ್ಚರ್ಯ ಪಡಬೇಕಿಲ್ಲ. ಆದರೆ, ಇಬ್ಬರು ನಟಿಯರು ಒಂದೇ ದಿನ ಗರ್ಭಿಣಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಘೋಷಿಸಿಕೊಂಡಿದ್ದು ಹಲವರಿಗೆ ಆಶ್ಚರ್ಯವಾಗಿತ್ತು. ಕೊನೆಗೆ ಗೊತ್ತಾಗಿದ್ದೇನೆಂದರೆ, ಅವರಿಬ್ಬರೂ ಗರ್ಭಿಣಿಯರಾಗುತ್ತಿರುವು ಹೊಸ ಚಿತ್ರವೊಂದರಲ್ಲಿ ಎಂದು.

ಶುಕ್ರವಾರ, ಮಲಯಾಳಂ ನಟಿಯರಾದ ಪಾರ್ವತಿ ಮತ್ತು ನಿತ್ಯಾ ಮೆನನ್​ ಇಬ್ಬರೂ ತಾವು ಗರ್ಭಿಣಿಯರು ಎಂದು ಘೋಷಿಸಿದರು. ತಮ್ಮ ಪ್ರೆಗ್ನನ್ಸಿ ಕಿಟ್​ಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಪ್ರದರ್ಶಿಸಿದರು. ಯಾವಾಗ, ಇದು ದೊಡ್ಡ ಸುದ್ದಿಯಾಯಿತೋ, ಸೆಲೆಬ್ರಿಟಿಗಳು ಸೇರಿದಂತೆ ಜನ ಸಾಮಾನ್ಯರು ಅವರಿಬ್ಬರಿಗೆ ವಿಷ್​ ಮಾಡಿದರು. ಅವರಿಗೆ ಒಳ್ಳೆಯದಾಗಲೀ ಎಂದು ಹಾರೈಸಿದರು. ಕೊನೆಗೆ ಗೊತ್ತಾಗಿದ್ದೇನೆಂದರೆ, ಅವರಿಬ್ಬರೂ ಗರ್ಭಿಣಿಯರಲ್ಲ, ಚಿತ್ರವೊಂದರಲ್ಲಿ ಗರ್ಭಿಣಿಯರಾಗಿ ನಟಿಸುತ್ತಿದ್ದಾರೆ ಎಂದು ಗೊತ್ತಾಯಿತು. ಬರೀ ಅವರಿಬ್ಬರಷ್ಟೇ ಅಲ್ಲ, ನಟಿಯರಾದ ಪದ್ಮಪ್ರಿಯಾ ಮತ್ತು ಸಯನೋರಾ ಫಿಲಿಪ್​ ಸಹ ಸೋಷಿಯಲ್​ ಮೀಡಿಯಾದಲ್ಲಿ ಅದೇ ಫೋಟೋ ಮತ್ತು ಶೀರ್ಷಿಕೆಯನ್ನು ಪೋಸ್ಟ್​ ಮಾಡಿದ್ದರು.

ಸರಿ, ಎಲ್ಲರೂ ಒಂದು ಚಿತ್ರಕ್ಕಾಗಿ ಇಷ್ಟೆಲ್ಲ ಮಾಡಿದ್ದಾರೆ ಎನ್ನುವುದೇನೋ ಸರಿ. ಆದರೆ, ಆ ಚಿತ್ರ ಯಾವುದು ಎಂಬ ಪ್ರಶ್ನೆ ಸಹಜ. ಆದರೆ, ಆ ಚಿತ್ರ ಯಾವುದು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಅಷ್ಟೇ ಅಲ್ಲ, ಆ ನಟಿಯರು ಸಹ ತಾವು ಯಾವ ಚಿತ್ರದಲ್ಲಿ ಗರ್ಭಿಣಿ ಪಾತ್ರ ಮಾಡುತ್ತಿರುವುದಾಗಿ ಹೇಳಿಕೊಂಡಿಲ್ಲ. ಹಾಗಾಗಿ, ಆ ಚಿತ್ರ ಯಾವುದು ಎಂಬ ರಹಸ್ಯ ಇನ್ನೂ ಬಗೆಹರಿದಿಲ್ಲ.

ಸದ್ಯಕ್ಕೆ ಆ ಚಿತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಗದಿರಬಹುದು. ಇಂದಲ್ಲ, ನಾಳೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಪ್ರೇಕ್ಷಕರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net