More

    ಭುಜಗಳ ಬಿಗಿತವನ್ನು ನಿವಾರಿಸಲು ಉಪಯುಕ್ತ ಆಸನವಿದು!

    ಎದೆಯ ಭಾಗಕ್ಕೆ ಮೃದುವಾದ ವ್ಯಾಯಾಮ ನೀಡಿ, ಭುಜಗಳ ಪೆಡಸುತನವನ್ನು ನಿವಾರಿಸುವ ಉಪಯುಕ್ತ ಆಸನವೆಂದರೆ ಪರ್ವತಾಸನ. ಪದ್ಮಾಸನದಲ್ಲಿ ಕುಳಿತು ಮಾಡುವ ಈ ಆಸನವು, ಕೈಗಳ ಮತ್ತು ಭುಜಗಳ ಸೆಳೆತಕ್ಕೆ ಉಪಶಮನ ನೀಡುತ್ತದೆ. ದೇಹಕ್ಕೆ, ಮನಸ್ಸಿಗೆ ಉಲ್ಲಾಸ ತರುತ್ತದೆ.

    ಪ್ರಯೋಜನಗಳು : ಈ ಆಸನದಿಂದ ಎದೆಯ ಭಾಗಕ್ಕೆ ಮೃದುವಾದ ವ್ಯಾಯಾಮ ಲಭಿಸುತ್ತದೆ. ಕೈಕಾಲುಗಳ ಕೀಲುನೋವು ಮತ್ತು ಭುಜಗಳ ಪೆಡಸುತನ ನಿಯಂತ್ರಣವಾಗುತ್ತದೆ. ಕೈಗಳ ಮತ್ತು ಭುಜಗಳ ಸೆಳೆತ ನಿಯಂತ್ರಣವಾಗುತ್ತದೆ. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾದ ಪ್ರತಿಬಂಧಗಳನ್ನು ತೆರವುಗೊಳಿಸಲು ಪರ್ವತಾಸನದ ಅಭ್ಯಾಸ ಸಹಕಾರಿ.

    ಇದನ್ನೂ ಓದಿ: ದೇಹಸೌಂದರ್ಯ ಹೆಚ್ಚಿಸಿ ಮನಸ್ಸಿಗೆ ಏಕಾಗ್ರತೆ ನೀಡುತ್ತೆ, ಈ ಸುಲಭ ಯೋಗಾಸನ!

    ಅಭ್ಯಾಸ ಕ್ರಮ : ಪ್ರಥಮವಾಗಿ ಪದ್ಮಾಸನ ಹಾಕುವುದು – ಅಂದರೆ ಬಲಗಾಲನ್ನು ಮಡಿಚಿ ಎಡತೊಡೆಯ ಮೇಲೆ, ಎಡಗಾಲನ್ನು ಮಡಿಚಿ ಬಲತೊಡೆಯ ಮೇಲೆ ಇಟ್ಟು ಚಿನ್ಮುದ್ರೆ ಹಿಡಿದು ಕೂರಬೇಕು. ಎದೆಯ ಮುಂದಕ್ಕೆ ಕೈಗಳನ್ನು ತಂದು ಬೆರಳುಗಳನ್ನು ಪರಸ್ಪರ ಹಿಡಿದುಕೊಳ್ಳುವುದು. ಕೈಗಳನ್ನು ತಿರುಗಿಸಿ, ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಶಿರಸ್ಸಿನ ಮೇಲೆ ತಂದು ನಿಲ್ಲಿಸಬೇಕು. ತೋಳುಗಳನ್ನು ನೇರವಾಗಿರಿಸಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ಅನಂತರ ಉಸಿರನ್ನು ಬಿಡುತ್ತಾ, ಕೈಗಳನ್ನು ಕೆಳಗಿಳಿಸಿ ಚಿನ್ಮುದ್ರೆ ಧರಿಸುವುದು. ಇದೇ ರೀತಿ ಮೂರು ಬಾರಿ ಅಥವಾ ಆರು ಬಾರಿ ಅಭ್ಯಾಸ ಮಾಡಬಹುದು. ನಂತರ ನಿಧಾನವಾಗಿ ಕಾಲುಗಳನ್ನು ಬಿಡಿಸಿಕೊಂಡು ಕೂತು ವಿಶ್ರಮಿಸಬೇಕು.

    ನಿರಾಯಾಸವಾಗಿ, ಸುಲಭವಾಗಿ ಪದ್ಮಾಸನ ಮಾಡಲು ಸಾಧ್ಯವಾಗುವವರು ಮಾತ್ರ ಪರ್ವತಾಸನವನ್ನು ಮಾಡಬೇಕು.

    ಮುಟ್ಟಿನ ದೋಷ ಮತ್ತು ಹೊಟ್ಟೆಯ ಬೊಜ್ಜಿಗೆ ಇದು ರಾಮಬಾಣ!

    ದಾಖಲೆ ಮುರಿದು ಚಿನ್ನ ಗೆದ್ದ ನಾರ್ವೇ ಕ್ರೀಡಾಪಟು; ಅಂಗಿ ಹರಿದು ಸಂಭ್ರಮಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts