'ನನಗೆ ಅಮ್ಮನಾಗಲು ಇಷ್ಟವಿಲ್ಲ..': 'ಪ್ಯಾರ್​ಗೆ ಆಗ್​ಬಿಟ್ಟೈತೆ' ಹುಡ್ಗಿ ಹೀಗಂದಿದ್ಯಾಕೆ?

Untitled-3
Published on

ಬೆಂಗಳೂರು: ಪ್ರತಿ ಹೆಣ್ಣು ಕೂಡ ತಾಯಿ ಆಗಬೇಕು ಎಂದು ಬಯಸುತ್ತಾಳೆ. ಆದರೆ ಈ 'ಪ್ಯಾರ್​ಗೆ ಆಗ್​ಬಿಟ್ಟೈತೆ' ಹುಡುಗಿ 'ನಾನಂತೂ ಅಮ್ಮನಾಗಲ್ಲ' ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ.

ಇಂಥದ್ದೊಂದು ನಿರ್ಧಾರಕ್ಕೆ ಬಂದಿರುವುದು ಬೇರೆ ಯಾರೂ ಅಲ್ಲ. ಕನ್ನಡದ 'ಗೋವಿಂದಾಯ ನಮಃ' ಸಿನಿಮಾದಲ್ಲಿ 'ಪ್ಯಾರ್​ಗೆ ಆಗ್​ಬಿಟ್ಟೈತೆ' ಎನ್ನುತ್ತ ಕನ್ನಡಿಗರ ಮನಗೆದ್ದು ನೆಲೆಸಿ ಈಗ 'ಬಟರ್​ ಫ್ಲೈ' ಹಾರಿಸುತ್ತಿರುವ ನಟಿ ಪಾರೂಲ್ ಯಾದವ್.

'ಹೆಣ್ತನದ ಸಾರವೇ ತಾಯ್ತನ. ಆದರೆ ನಾನಿಂದು ಅಮ್ಮನಾಗಲು ಬಯಸುತ್ತಿಲ್ಲ. ಹೀಗಂತ ಹೇಳುವುದು ಒಂದು ಹೆಣ್ಣಿಗೆ ತುಂಬಾ ಕಷ್ಟ. ಆದರೆ ನಾನು ಆಣೆ ಮಾಡಿ ಹೇಳುತ್ತಿದ್ದೇನೆ, ನಾನು ತಾಯ್ತನವನ್ನು ತ್ಯಜಿಸುತ್ತಿದ್ದೇನೆ. ನನ್ನ ಮಗು ಹೆಣ್ಣಾದರೆ ಏನು ಮಾಡುವುದು? ಈ ದೇಶ ಎಲ್ಲ ಕಡೆಯಲ್ಲೂ ಹೆಣ್ಣಿಗೆ ಕೆಟ್ಟದಾಗಿಯೇ ಇದೆ. ಹತ್ರಾಸ್​ನಲ್ಲಿನ ಅತಿಘೋರ ಘಟನೆಯೇ ಅದಕ್ಕೆ ತಾಜಾ ಉದಾಹರಣೆ. ಕಾರಣಗಳು ಬೇರೆ ಇರಬಹುದು, ಆದರೆ ಸಂಕಷ್ಟ ಯಾವಾಗಲೂ ಹೆಣ್ಣಿಗೇ, ಅವಳಿಗೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ..' ಎಂಬುದಾಗಿ ಪಾರೂಲ್​ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net