ಮಕ್ಕಳ ಫೆವರೇಟ್ ಪಾರ್ಲೆ-ಜಿ ಈಗ ಡಾರ್ಕ್ ಪಾರ್ಲೆ-ಜಿ!; ಇದ್ಯಾವುದಪ್ಪಾ ಹೊಸದು ಎಂದ ನೆಟ್ಟಿಗರು

parleg
Published on

ನವದೆಹಲಿ: ಮಾರುಕಟ್ಟೆಯಲ್ಲಿ ಎಷ್ಟೇ ವಿಧದ, ವಿನ್ಯಾಸದ ಬಿಸ್ಕತ್ ಇದ್ರೂ ಪಾರ್ಲೆಜಿಗೆ ಬೇಡಿಕೆ ಕಡಿಮೆಯಾಗಿಲ್ಲ. ಪಾರ್ಲೆ-ಜಿ ಹೊಸ ಆವೃತ್ತಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಚಿತ್ರ ನಿಜವೋ ಅಥವಾ ಫೋಟೋಶಾಪ್ ನಿಂದ ಮಾಡಲ್ಪಟ್ಟಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪಾರ್ಲೆಜಿ ಬಿಸ್ಕೆಟ್ 90 ರ ದಶಕದ ಮಕ್ಕಳ ಫೆವರೇಟ್ . ಪ್ರಸ್ತುತ ಕಾಲಘಟ್ಟದಲ್ಲಿ ತರಹೇವಾರಿ ಬಿಸ್ಕೆಟ್ ಗಳಿದ್ದರೂ ಹೆಚ್ಚಿನವರು ಪಾರ್ಲೆ-ಜಿ ಬಿಸ್ಕೆಟ್ ತಿನ್ನಲು ಇಷ್ಟಪಡುತ್ತಾರೆ. 1929 ರಲ್ಲಿ ಶುರುವಾದ ಈ ಪಾರ್ಲೆ-ಜಿ ಬಿಸ್ಕೆಟ್ ಒಂದೇ ಫ್ಲೇವರ್ ಅಲ್ಲಿ ಮಾತ್ರ ಲಭ್ಯವಿತ್ತು. ಆದರೆ ಇದೀಗ ಚಾಕೊಲೇಟ್ ಫ್ಲೇವರ್ ನ ಡಾರ್ಕ್ ಪಾರ್ಲೆ-ಜಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಎಷ್ಟರ ಮಟ್ಟಿಗೆ ಸತ್ಯವಾಗಿದೆ ಎನ್ನುವುದು ತಿಳಿದು ಬಂದಿಲ್ಲ.

ವೈರಲ್ ಆಗಿರುವ ಫೋಟೋದಲ್ಲಿ “ಡೆಲಿಸಿಯಸ್ ಚಾಕೊಲೇಟಿ ಡಾರ್ಕ್ ಚಾಕೊಲೇಟ್ ಬಿಸ್ಕೆಟ್” ಎಂದು ಬರೆದಿರುವ ಚಾಕೊಲೇಟ್ ಫ್ಲೇವರ್ ನ ಡಾರ್ಕ್ ಪಾರ್ಲೆ-ಜಿ ಬಿಸ್ಕೆಟ್ ಪೊಟ್ಟಣವನ್ನು ಕಾಣಬಹುದು. ಆದರೆ ಪಾರ್ಲೆ-ಜಿ ಯ ಅಧೀಕೃಯ ವೆಬ್ ಸೈಟ್ ಅಲ್ಲಿ ಈ ಡಾರ್ಕ್ ಪಾರ್ಲೆ-ಜಿ ಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ ಸೋಶಿಯಲ್​​ ಮೀಡಿಯಾ ತುಂಬಾ ವೈರಲ್​​ ಆಗುತ್ತಿದೆ.

ಈ ಬಗ್ಗೆ ಯಾವುದೇ ಕಂಪನಿಯಿಂದ ಯಾವುದೇ ಮಾಹಿತಿ ಇಲ್ಲ, ಸುಳ್ಳು ಸುದ್ದಿ, ಇದು ಕೇವಲ AI ರಚಿತ ಫೋಟೋ, ಈ ಬಗ್ಗೆ ಗೂಗಲ್ ನಲ್ಲಿಯೂ ಯಾವುದೇ ಮಾಹಿತಿ ಇಲ್ಲʼ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net