ಪ್ಯಾರೀಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತದ ಪದಕ ಭೇಟೆ ಆರಂಭವಾಗಿದೆ. ವನಿತೆಯರ 10 ಮೀ ಏರ್ ರೈಫಲ್ ಸ್ಟಾಂಡಿಂಗ್ ಸ್ಪರ್ಧೆಯಲ್ಲಿ ಭಾರತದ ಅವನಿ ಲೇಖರಾ ಇತಿಹಾಸ ಸೃಷ್ಟಿಸಿದ್ದು, 249.7 ಅಂಕ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಗುರಿಯಿಟ್ಟರೆ, ಮೋನಾ ಅಗರ್ವಾಲ್ ಕಂಚು ಗೆದ್ದುಕೊಂಡಿದ್ದಾರೆ.
ಇದನ್ನೂ ಓದಿ: ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ: ಸಿಎಂ ಸಿದ್ದರಾಮಯ್ಯ
ಅವನಿ ಲೇಖರಾ ಇತಿಹಾಸ ಸೃಷ್ಟಿಸಿದ್ದು, ಟೋಕಿಯೋ ಒಲಿಂಪಿಕ್ಸ್ನಲ್ಲಿ ನಿರ್ಮಿಸಿದ್ದ ತಮ್ಮದೇ ದಾಖಲೆಯನ್ನು ಅವನಿ ಮುರಿದಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಅವನಿ ಲೇಖರಾ ಒಟ್ಟಾರೆಯಾಗಿ 249.6 ಅಂಕ ಕಲೆಹಾಕಿ ಚಿನ್ನದ ಪದಕ ಗೆದ್ದಿದ್ದರು. ಇದೀಗ ಪ್ಯಾರಿಸ್ನಲ್ಲಿ 249.7 ಅಂಕ ಗಳಿಸುವ ಮೂಲಕ ಚಿನ್ನ ಗೆದ್ದಿರುವ ಅವನಿ ತಮ್ಮದೇ ಹಳೆಯ ದಾಖಲೆಯನ್ನು ಪುಡಿಗಟ್ಟಿದ್ದಾರೆ.
GOLD 🥇 For India 🇮🇳#ParalympicGamesParis2024: India's Avani Lekhara clinches gold with a Games record tally of 249.7 in shooting🙌#Paris2024 | #Cheer4Bharat | #Paralympics2024 | @mansukhmandviya | @ParalympicIndia pic.twitter.com/8oYGAInSlX
— All India Radio News (@airnewsalerts) August 30, 2024
ಅಂತಿಮ ಸುತ್ತಿನಕ್ಕಿಂತ ಹಿಂದಿನ ಸುತ್ತಿನ ಶೂಟ್ನಲ್ಲಿ ಅವನಿ ಲೇಖರಾ 9.9 ಅಂಕಕ್ಕೆ ಗುರಿ ಇಟ್ಟರು. ಪ್ರತಿಸ್ಪರ್ಧಿ ಯುನ್ರಿ ಲಿ ಅವರು ಆಡುತ್ತಿದ್ದ ಕಾರಣ ಚಿನ್ನ ಗೆಲ್ಲುವ ಸಾಧ್ಯತೆಯ ಆತಂಕ ಉಂಟಾಗಿತ್ತು. ಅಂತಿಮ ಹೊಡೆತದಲ್ಲಿ ಅವನಿ 10.5ಕ್ಕೆ ಗುರಿಯಿಟ್ಟರು. ಆದರೆ ಒತ್ತಡಕ್ಕೆ ಸಿಲುಕಿದ ಕೊರಿಯಾ ಆಟಗಾರ್ತಿ ಕೇವಲ 6.8 ಅಂಕಕ್ಕೆ ಗುಂಡಿಕ್ಕಿ ನಿರಾಸೆ ಅನುಭವಿಸಿದರು. ಈ ಮೂಲಕ ದಕ್ಷಿಣ ಕೊರಿಯಾದ ಲೀ ಯುನ್ರಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.
22 ಕ್ರೀಡೆಗಳಲ್ಲಿ ಒಟ್ಟು 549 ಸ್ಪರ್ಧೆಗಳು ನಡೆಯಲಿವೆ: ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 22 ಕ್ರೀಡೆಗಳ 549 ಸ್ಪರ್ಧೆಗಳು ನಡೆಯಲಿವೆ. 184 ದೇಶಗಳ ಅಂದಾಜು 4400ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಪ್ಯಾರಿಸ್ ನಗರ ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿದೆ. ಫ್ರಾನ್ಸ್‌ನಲ್ಲಿ ನಡೆಯಲಿರುವ 2ನೇ ಪ್ಯಾರಾಲಿಂಪಿಕ್ಸ್ ಇದು. 1992ರಲ್ಲಿ ಟಿಗ್ನೆಸ್ ಹಾಗೂ ಆಲ್ಬರ್ಟ್‌ವಿಲ್ಲೆ ನಗರಗಳು ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ್ದವು.
ಪ್ಯಾರಾಲಿಂಪಿಕ್ಸ್‌ಗೆ ಈ ಬಾರಿ ಭಾರತ 84 ಕ್ರೀಡಾಪಟುಗಳನ್ನು ಕಳುಹಿಸಿದ್ದು, ಇದು ಭಾರತದ ಮಟ್ಟಿಗೆ ದಾಖಲೆ ಎನಿಸಿದೆ. 2020ರ ಟೋಕಿಯೋ ಪ್ಯಾರಾಗೇಮ್ಸ್‌ಗೆ 54 ಅಥ್ಲೀಟ್‌ಗಳು ತೆರಳಿ, 19 ಪದಕಗಳನ್ನು ಜಯಿಸಿದ್ದರು. 1968ರಲ್ಲೇ ಮೊದಲ ಬಾರಿಗೆ ಭಾರತದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರೂ, 1984ರಿಂದ ನಡೆದ ಪ್ರತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಿದೆ.
ವಿದೇಶಕ್ಕೆ ಹೊರಟ ಅಣ್ಣಾಮಲೈ: ತಮಿಳುನಾಡು ಬಿಜೆಪಿಯಲ್ಲಿ 6 ಸದಸ್ಯರ ಸಮನ್ವಯ ಸಮಿತಿ ರಚನೆ