ಇದೇ ವಾರ ನಡೆಯಲಿದೆಯಂತೆ ಪರಿಣೀತಿ ಚೋಪ್ರಾ, ರಾಘವ್​ ಛಡ್ಡಾ ನಿಶ್ಚಿತಾರ್ಥ …

Parineeti Chopra - Raghav Chadha
Published on

ಮುಂಬೈ: ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್​ ಛಡ್ಡಾ ಪರಸ್ಪರ ಪ್ರೀತಿಸುತ್ತಿದ್ದಾರೆ, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತು ಇತ್ತೀಚೆಗೆ ಕೇಳಿ ಬಂದಿತ್ತು. ಆದರೆ, ಮಾಧ್ಯಮದವರು ಈ ವಿಷಯ ಕೆದಕಿದಾಗ ಪರಿಣೀತಿ ಆಗಲೀ, ರಾಘವ್​ ಆಗಲೀ ತುಟಿಕ್​ ಪಿಟಿಕ್​ ಎನ್ನಲಿಲ್ಲ. ಈಗ ನೋಡಿದರೆ ಅವರಿಬ್ಬರ ನಿಶ್ಚಿತಾರ್ಥ ಇದೇ ವಾರ ದೆಹಲಿಯಲ್ಲಿ ನಡೆಯಲಿದೆ ಎಂಬ ಮಾಹಿತಿ ಇದೆ.

ಹೌದು, ನಿಶ್ಚಿತಾರ್ಥ ನಡೆಯುತ್ತಿರುವ ಬಗ್ಗೆ ಪರಿಣೀತಿ ಅಥವಾ ರಾಘವ್​ ಕಡೆಯಿಂದ ಯಾವುದೇ ಮಾಹಿತಿ ಬರದಿದ್ದರೂ, ಇದೇ ವಾರ ದೆಹಲಿಯಲ್ಲಿ ಅವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಈಗಾಗಲೇ ಪರಿಣಿತಿ, ದೆಹಲಿ ತಲುಪಿದ್ದು ಅಲ್ಲಿ ನಿಶ್ಚಿತಾರ್ಥದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರಂತೆ.

ಈ ಸಮಾರಂಭದಲ್ಲಿ ಕೆಲವರು ಆಪ್ತರು ಮಾತ್ರ ಭಾಗವಹಿಸಲಿದ್ದು, ಈ ಪೈಕಿ ಪರಿಣೀತಿ ಸಂಬಂಧಿ ಪ್ರಿಯಾಂಕಾ ಚೋಪ್ರಾ ಹೆಸರು ಸಹ ಇದೆ. ಪ್ರಿಯಾಂಕಾ ಅಷ್ಟೇ ಅಲ್ಲ, ನಿಕ್​ ಜೋನಾಸ್​ ಮತ್ತು ಮಾಲ್ತಿ ಮೇರಿ ಸಹ ಸದ್ಯದಲ್ಲೇ ಲಂಡನ್​ನಿಂದ ದೆಹಲಿಗೆ ಬಂದು ಈ ನಿಶ್ಚಿತಾರ್ಥದಲ್ಲಿ ಭಾಗವಹಿಸಲಿದ್ದಾರೆ.

ಪರಿಣೀತಿ ಚೋಪ್ರಾ ಸದ್ಯ 'ಚಮ್ಕೀಲಾ' ಮತ್ತು 'ಕ್ಯಾಪ್ಸೂಲ್​ ಗಿಲ್​' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net