ನಿರಾಂತಕ ಕಲಿಕೆಯಿಂದ ಗುರಿ ಸಾಧನೆ : ಡಾ.ಶ್ರುತಕೀರ್ತಿರಾಜ್ ಸಲಹೆ

9-vani
Published on

ಬೆಳ್ತಂಗಡಿ: ವಿದ್ಯಾರ್ಥಿಗಳು ನಿರಾಂತಕ ಕಲಿಕೆಯಲ್ಲಿ ತೊಡಗಿಸಿಕೊಂಡು ಗುರಿ ತಲುಪುವಲ್ಲಿ ಸಫಲರಾಗಬೇಕು ಎಂದು ಮಂಗಳೂರು ಶ್ರುತ ಅಕಾಡೆಮಿಯ ಮುಖ್ಯಸ್ಥ ಡಾ.ಶ್ರುತಕೀರ್ತಿರಾಜ್ ಹೇಳಿದರು.

ವಾಣಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಮಾತನಾಡಿ, ಸಿಇಟಿ, ನೀಟ್‌ನಂತಹ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಬೇಕಾದರೆ ವಿದ್ಯಾರ್ಥಿ ಸ್ವಆಸಕ್ತಿಯಿಂದ ಇಷ್ಟಪಟ್ಟು ಅಧ್ಯಯನ ಮಾಡಬೇಕು. ಪರೀಕ್ಷೆಯ ಫಲಿತಾಂಶ ಬರುವವರೆಗೆ ತಾಳ್ಮೆಯಿಂದ ಕಾಯಬೇಕು. ಆತಂಕದಿಂದ ಆತುರದ ನಿರ್ಧಾರ ಕೈಗೊಂಡು ಅಧಿಕ ವೆಚ್ಚ ಮಾಡಿ ವಿವಿಧ ಕೋರ್ಸ್‌ಗಳನ್ನು ಮಾಡುವ ಯೋಚನೆಯಿಂದ ಹೊರಬರಬೇಕು ಎಂದರು.

ವಾಣಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಯದುಪತಿ ಗೌಡ ಸ್ವಾಗತಿಸಿದರು. ಉಪಪ್ರಾಂಶುಪಾಲ ವಿಷ್ಣು ಪ್ರಕಾಶ್ ವಂದಿಸಿದರು. ಶಿಕ್ಷಕ-ರಕ್ಷಕ ಸಂಘದ ಸಂಯೋಜಕಿ ವಿನಯಾ ಬಿಢೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net