ಶ್ರೀನಿವಾಸ ಪ್ರಸಾದ್ ಎಸ್‌ಡಿಎಂಸಿ ಅಧ್ಯಕ್ಷ

New Project (4)
Published on

ಪುತ್ತೂರು ಗ್ರಾಮಾಂತರ : ಪಾಣಾಜೆ ಗ್ರಾಮದ ಸೂರಂಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೈಮುನುತ್ತಲ್ ಮೆಹ್ರಾ ನೇತೃತ್ವದಲ್ಲಿ ನಡೆದ ಪಾಲಕರ ಸಭೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯನ್ನು ಪುನರ್ ರಚಿಸಲಾಯಿತು.

ಅಧ್ಯಕ್ಷರಾಗಿ ಶ್ರೀನಿವಾಸ ಪ್ರಸಾದ್ ಎಸ್.ಪಿ ಸೂರಂಬೈಲು, ಉಪಾಧ್ಯಕ್ಷೆಯಾಗಿ ಅಂಬಿಕಾ ಭರಣ್ಯ ಅವರನ್ನು ಆಯ್ಕೆ ಮಾಡಲಾಯಿತು.ಪಾಲಕ ಪ್ರತಿನಿಧಿಗಳಾಗಿ ಸುರೇಶ್ ನಾಯ್ಕ, ಮಧುಸೂದನ, ಕೃಷ್ಣ ನಾಯ್ಕ, ಶಂಕರ ಭರಣ್ಯ, ನಾರಾಯಣ ಬಿ.ಕೆ, ಗುಣಶೀಲ, ಪಾರ್ವತಿ, ಮಹೇಶ್, ಸುನೀತಾ ಬಿ, ಉಷಾ ಬಾಜುಗುಳಿ, ಗೀತಾ ಎಸ್, ಈಶ್ವರಿ, ನಟರಾಜ್ ಕೆ, ನಳಿನಾಕ್ಷಿ, ನಾಗವೇಣಿ, ಸುನೀತಾ ತಾರಾನಾಥ್ ಅವರನ್ನು ಆಯ್ಕೆ ಮಾಡಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ಸುನೀತಾ ತಾರಾನಾಥ್ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಪಾಣಾಜೆ ಗ್ರಾಮ ಪಂಚಾಯಿತಿ ವಾರ್ಡ್ ಸದಸ್ಯೆ ಸುಲೋಚನಾ, ಶಾಲಾ ಮುಖ್ಯಶಿಕ್ಷಕಿ ಊರ್ಮಿಳಾ ಕೆ.ಉಪಸ್ಥಿತರಿದ್ದರು. ಶಾಲಾ ಸಹಶಿಕ್ಷಕ ನಾಗೇಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಪವಿತ್ರ ಎಂ.ಆರ್. ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net